ದಾಸೋಹ ಕಲ್ಪನೆಯಂತೆ ಇಂದಿರಾ ಕ್ಯಾಂಟಿನ್​ ಸೇವೆ

Indira Canteen service as per the concept of slavery
ನಾಲತವಾಡದಲ್ಲಿ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಅಪ್ಪಾಜಿ ನಾಡಗೌಡ ಅವರು ಇಂದಿರಾ ಕ್ಯಾಂಟಿನ್​ ಉದ್ಘಾಟಿಸಿದರು.ಪಟ್ಟಣ ಪಂಚಾಯಿತಿ ಅಧ್ಯೆ ವಿಜಯಲಕ್ಷಿ$್ಮ ಇಳಕಲ್​,ಬಸವರಾಜ ಗಂಗನಗೌಡ್ರ ಗಡ್ಡಿ, ಈರಣ್ಣ ಕೊಣ್ಣೂರ ಇತರರಿದ್ದರು.
Published on

ನಾಲತವಾಡ: ಬಡ, ಕಾರ್ಮಿಕರಿಗೆ ಅನುಕೂಲವಾಗುವಂತೆ ಸರ್ಕಾರ ಇಂದಿರಾ ಕ್ಯಾಂಟಿನ್​ ಸೇವೆ ಸಲ್ಲಿಸುತ್ತಿದೆ ಎಂದು ಶಾಸಕ ಸಿ.ಎಸ್​. ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ಬಸ್​ನಿಲ್ದಾಣದಲ್ಲಿ ಮಂಗಳವಾರ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಇಂದಿರಾ ಕ್ಯಾಂಟಿನ್​ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನ ಮೂರ್ತಿ ಸ್ಥಾಪಿಸಿ, ಪೂಜೆ ಸಲ್ಲಿಸಿದರೆ ಸಾರ್ಥಕವಾಗುವುದಿಲ್ಲ. ಕಲ್ಯಾಣ ರಾಜ್ಯದ ಎಲ್ಲ ಆದರ್ಶಗಳನ್ನು ಪಂಚ ಗ್ಯಾರಂಟಿಗಳ ಮೂಲಕ ಸರ್ಕಾರ ಸಾರ್ಥಕಪಡಿಸುತ್ತಿದೆ ಎಂದರು.

ಹಸಿದವರ ಹೊಟ್ಟೆ ತುಂಬಿಸಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟಿನ್​ ಸ್ಥಗಿತಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿತ್ತು, ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿಯೋಜನೆಗಳನ್ನು ಬಿಜೆಪಿಯವರು ಟೀಕಿಸುತ್ತಲೇ ಬೇರೆ ಬೇರೆ ಹೆಸರಲ್ಲಿ ದೇಶದ ತುಂಬೆಲ್ಲ ಕಾಂಗ್ರೆಸ್​ ಯೋಜನೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.

ಪಟ್ಟಣ ಪಂಚಾಯಿತಿ ಅಧ್ಯೆ ವಿಜಯಲಕ್ಷಿ$್ಮ ಇಳಕಲ್​ ಪಂಚ ಗ್ಯಾರಂಟಿ ಯೋಜನೆ ಪ್ರಯೋಜನ ಕುರಿತು ಮಾತನಾಡಿದರು.

ಪ.ಪಂ.ಉಪಾಧ್ಯ ಬಸವರಾಜ ಗಂಗನಗೌಡ್ರ ಗಡ್ಡಿ, ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಸದಸ್ಯರಾದ ಪೃಥ್ವಿರಾಜ ನಾಡಗೌಡ, ಡಾ.ಶರಣಬಸು ಗಂಗನಗೌಡ್ರ,ಲಕ್ಷಿ$್ಮ ಬಂಡಿವಡ್ಡರ, ಅಮರಪ್ಪ ಶೀರಿ, ಗಣ್ಯರಾದ ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ,ಅಮರ ದೇಶಮುಖ, ಎ.ಜಿ.ಗಂಗನಗೌಡ್ರ, ಚಂದ್ರಶೇಖರ ಮೇಟಿ, ಲಾಳೆಮಶಾಕ ಅವಟಿ,ಶಿವಪ್ಪಗೌಡ ತಾತರಡ್ಡಿ ಪುಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net