ಇಂದಿರಾ ಕ್ಯಾಂಟೀನ್​  ಉದ್ಘಾಟನೆ

Inauguration of Indira Canteen
ನಾಲತವಾಡ ಬಸ್​ ನಿಲ್ದಾಣ ಹತ್ತಿರ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್​ ಪರಿಶೀಲಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು.
Published on

ನಾಲತವಾಡ: ವಿದ್ಯಾರ್ಥಿಗಳು ಹಾಗೂ ಜನತೆಗೆ ಕಡಿಮೆ ದರದಲ್ಲಿ ಹಸಿವು ನೀಗಿಸುವ ಮಹತ್ವಾಕಾಂ ಯೋಜನೆ ಇಂದಿರಾ ಕ್ಯಾಂಟೀನ್​ ಶ್ರೀದಲ್ಲೆ ಉದ್ಘಾಟನೆಯಾಗಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಹೇಳಿದರು.

ಪಟ್ಟಣದ ಬಸ್​ ನಿಲ್ದಾಣದಲ್ಲಿನ ಇಂದಿರಾ ಕ್ಯಾಂಟಿನ್​ಗೆ ಮಂಗಳವಾರ ಸಿಬ್ಬಂದಿಯೊಂದಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ನೀಡುವ ಉಪಾಹಾರ ಹಾಗೂ ಊಟದ ಮಾಹಿತಿ, ಶುಚಿತ್ವ ಕುರಿತು ವಿವರಿಸಿದರು.

ಶಾಸಕ ಸಿ.ಎಸ್​. ನಾಡಗೌಡ ಅಪ್ಪಾಜಿ ಅವರ ಆಸಕ್ತಿಯಿಂದ ಪಟ್ಟಣದ ಬಸ್​ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಇಂದಿರಾ ಕ್ಯಾಂಟೀನ್​ ಆರಂಭಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಶ್ರೀ ಉದ್ಘಾಟಿಸುವ ಮೂಲಕ ಬಡ ಜನರ ಸೇವೆಗೆ ಸಮರ್ಪಿಸಲಾಗುವುದು ಎಂದರು.

ಕ್ಯಾಂಟೀನ್​ನಲ್ಲಿ ಬೆಳಗ್ಗೆ ಇಡ್ಲಿ, ಕೇಸರಿ ಬಾತ್​, ಜೋಳದ ರೊಟ್ಟಿ, ತರಕಾರಿ, ಅನ್ನ ಹಾಗೂ ಸಾರು ಸೇರಿ ಇತರ ಖಾದ್ಯಗಳನ್ನು ಬೇಡಿಕೆಗೆ ಅನುಗುಣವಾಗಿ ಸಿಬ್ಬಂದಿ ತಯಾರಿಸಲಿದ್ದಾರೆ ಎಂದರು.

ಇಂದಿರಾ ಕ್ಯಾಂಟೀನ್​ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯಿಲ್ಲ.ಬಸ್​ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದರೆ ಮಾತ್ರ ವಿದ್ಯಾರ್ಥಿನಿಯರು, ಮಹಿಳೆಯರು ಇಂದಿರಾ ಕ್ಯಾಂಟೀನ್​ ಬಳಿ ತೆರಳಲು ಸಾಧ್ಯ. ಇಲ್ಲದ್ದಿದ್ದರೆ ಕ್ಯಾಂಟೀನ್​ ಆಶಯಕ್ಕೆ ಹೊಡೆತ ಬೀಳಲಿದೆ. ಕ್ಯಾಂಟೀನ್​ ಸುತ್ತಲಿನ ಪ್ರದೇಶ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ದಲಿತ ಸಂರ್ಷ ಸಮಿತಿ ಜಿಲ್ಲಾ ಸಂಯೋಜಕ ಮಂಜುನಾಥ ಕಟ್ಟಿಮನಿ ಮನವಿ ಮಾಡಿದರು.

ಕ್ಯಾಂಟೀನ್​ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಇಂಜಿನಿಯರ್​ ವೀರೇಶ ದೊಡಮನಿ ತಿಳಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಣಮಂತ ಕುರಿ, ವೀರೇಶ ದೊಡಮನಿ, ಪ್ರಕಾಶ ಸಜ್ಜನ, ಅಲ್ತ್​ಾ ಮೂಲಿಮನಿ, ವೀರೇಶ ತಂಗಡಗಿ, ಸಿದ್ದಲಿಂಗ ಪೂಜಾರಿ, ಸದ್ದಾಮ್​ ತಂಗಡಿ, ರಜೀಬಸಾಬ ಮಲಗಲದಿನ್ನಿ, ಇಮಾಮಸಾಬ ತಂಗಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net