ಮಹಾವೀರ ಸಮುದಾಯ ಭವನಕ್ಕೆ ಧರ್ಮಸ್ಥಳದಿಂದ ಅನುದಾನ

Grant from Dharmasthala for Mahavira Community Hall
ಮುದ್ದೇಬಿಹಾಳದಲ್ಲಿ ಭಗವಾನ್​ ಮಹಾವೀರ ಸಮುದಾಯ ಭವನಕ್ಕೆ ಧರ್ಮಸ್ಥಳದಿಂದ ಮಂಜೂರಾದ 5 ಲ ಅನುದಾನದ ಚಕ್​ನ್ನು ಮಹಾವೀರ ಸಗರಿ ಅವರಿಗೆ ಹಸ್ತಾಂತರಿಸಲಾಯಿತು. ಶ್ರೀಶೈಲ ದೊಡಮನಿ, ಡಾ.ವೀರೇಶ ಪಾಟೀಲ, ನಾಗೇಶ ಬಿ.ಇತರರಿದ್ದರು.
Published on

ಮುದ್ದೇಬಿಹಾಳ: ಮಹಾವೀರ ಜೈನ ಅಲ್ಪಸಂಖ್ಯಾತರ ಚಾರಿಟೇಬಲ್​ ಟ್ರಸ್ಟ್​ ಅಡಿ ನಿರ್ಮಾಣಗೊಳ್ಳುತ್ತಿರುವ 1008 ಭಗವಾನ ಮಹಾವೀರ ಸಮುದಾಯ ಭವನ ನಿರ್ಮಾಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ 5ಲಕ್ಷ ರೂ.ಅನುದಾನ ಮಂಜೂರು ಮಾಡಿದ್ದು, ಬುಧವಾರ ಟ್ರಸ್ಟ್​ ಅಧ್ಯ ಮಹಾವೀರ ಸಗರಿ ಅವರಿಗೆ ಚಕ್​ ಹಸ್ತಾಂತರಿಸಲಾಯಿತು.

ನಂತರ ಮಾತನಾಡಿದ ಸಗರಿ, ಧರ್ಮಸ್ಥಳದಿಂದ ಬಂದಿರುವ ಸಹಾಯಧನವು ಗ್ರಾಮೀಣ ಜೈನ ಸಮುದಾಯದ ಸಾಂಸತಿಕ, ಧಾರ್ಮಿಕ ಬೆಳವಣಿಗೆಗೆ ಹೆಚ್ಚು ಅನುಕೂಲ ಮಾಡಿಕೊಟ್ಟಂತಾಗಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ನಾಗೇಶ ಬಿ., ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶ್ರೀಶೈಲ ದೊಡಮನಿ, ಡಾ.ವೀರೇಶ ಪಾಟೀಲ, ಕೃಷ್ಣ್ಣಮೂರ್ತಿ, ನಾಗಪ್ಪ, ಸ್ತ್ರೀ ಶಕ್ತಿ ಸಂ ಒಕ್ಕೂಟದ ಮಂಜುಳಾ ಕೆಸರಟ್ಟಿ, ಸೇವಾ ಪ್ರತಿನಿಧಿಗಳಾದ ವಿಜಯಲಕ್ಷಿ$್ಮ, ಶೈಲಾ ಚಿನಿವಾರ, ಗೋಮಟೇಶ್ವರ ಸಗರಿ, ಮಾಣಿಕ ಸಗರಿ, ರಾಜನಾರಾಯಣ ನಲವಡೆ, ಬಿ.ಐ.ಬಡಿಗೇರ, ಜಿ.ಡಿ.ಬಡಿಗೇರ, ಅಶೋಕ ಹಡಪದ, ಎಚ್​.ಎಸ್​.ಗೌಡರ, ಸಮೀರ ಬಾಗವಾನ, ರವಿ ಮರೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net