ವೈಭವದ ಶಾಲಾ ಪ್ರಾರಂಭೋತ್ಸವ

Glorious school commencement ceremony -1
ನಾಲತವಾಡದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್​ ಕ್ಲಾಸ್​ನ್ನು ಪಲ್ಲವಿ ನಾಡಗೌಡ ಉದ್ಘಾಟಿಸಿದರು. ಬಿಇಒ ಬಿ.ಎಸ್​.ಸಾವಳಗಿ, ಶಿಕರ ಸಂದ ಅಧ್ಯ ಬಸವರಾಜ ಮುದ್ನೂರ, ಪಟ್ಟಣ ಪಂಚಾಯಿತಿ ಅಧ್ಯೆ ವಿಜಯಲಕ್ಷಿ$್ಮ ಇಳಕಲ್​ ಇದ್ದರು.
Published on

ನಾಲತವಾಡ:ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕರಿಸಿ ಪ್ರಾರಂಭದ ದಿನವೇ ಮಕ್ಕಳು ಶಾಲೆಯಡೆಗೆ ಬರುವಂತೆ ಹೋಬಳಿಯ ಬಿಜ್ಜೂರ, ಖಾನಾಪುರ , ಅಯ್ಯನಗುಡಿ, ಲೊಟಗೇರಿ, ಚಿಕ್ಕ ಬಿಜ್ಜೂರ, ಘಾಳಪೂಜಿ, ಟಕ್ಕಳಕಿ, ಬಲದಿನ್ನಿ, ಕಾರಕೂರ, ರಕ್ಕಸಗಿ, ಹುನಕುಂಟಿ,ಬಂಗಾರಗುಂಡ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಮೆರಗು ತಂದುಕೊಡಲಾಯಿತು.

ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ಶಿಣ ಇಲಾಖೆಯಿಂದ ಉಚಿತ ಪಠ್ಯ ಪುಸ್ತಕಗಳು ಸರಬರಾಜಾಗಿವೆ. ಬಹುತೇಕ ಶಾಲೆಗಳಲ್ಲಿ ಪಠ್ಯ ಪುಸ್ತಕ ಲಭ್ಯವಿದ್ದು, ಗುರುವಾರ ಪಾಲಕರು, ಜನಪ್ರತಿನಿಧಿಗಳು ಶಾಲೆಗೆ ಆಗಮಿಸಿ ಪ್ರಾರಂಭೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಪಟ್ಟಣದ ದೇಶಮುಖ ಓಣಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್​ಕ್ಲಾಸ್​ ನ್ನು ರಾಜ್ಯ ಕಾಂಗ್ರೆಸ್​ ಮಹಿಳಾ ಟಕದ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಉದ್ಘಾಟಿಸಿದರು. ಬಿಇಒ ಬಿ.ಎಸ್​.ಸಾವಳಗಿ, ಶಿಕರ ಸಂದ ಅಧ್ಯ ಬಸವರಾಜ ಮುದ್ನೂರ, ಪಟ್ಟಣ ಪಂಚಾಯಿತಿ ಅಧ್ಯೆ ವಿಜಯಲಕ್ಷಿ$್ಮ ಇಳಕಲ್​ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net