

ನಾಲತವಾಡ: ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯ ಗಡಿ ಭಾಗದ ಬಸವಸಾಗರ ಜಲಾಶಯ ಸಮೀಪದಲ್ಲಿರುವ, ಸರ್ಕಾರಿ ಸಸ್ಯಪಾಲನಾ ಅರಣ್ಯಇಲಾಖೆಯ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದರಿಮದ ಅನಾಹುತ ತಪ್ಪಿದೆ. ಈ ವೇಳೆ ಮುದ್ದೇಬಿಹಾಳ ಪೋಲಿಸ್ ಠಾಣೆಯ ಸಿಪಿಐ ಅಹ್ಮದ ಪರೋದಿನ, ಪಿಎಸ್ಐ ಸಂಜಯ ತಿಪ್ಪಾರೆಡ್ಡಿ,ನಾಲತವಾಡ ಹೊರ ಠಾಣೆಯ ಸಿಬ್ಬಂದಿ ಬಸವರಾಜ ಹಿಪ್ಪರಗಿ, ರವಿ ವಿಜಯಪುರ, ಹನುಮಂತ ಹೆಬ್ಬುಲಿ, ಬಸವರಾಜ ಚಿಂಚೋಳಿ, ಅಗ್ನಿ ಶಾಮಕದಳ ಅಧಿಕಾರಿ ಪ್ರಮೋದ ಸುಂಕದ ಹಾಗೂ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.