

ಮುದ್ದೇಬಿಹಾಳ: ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮೇ 7, 8, 9 ರಂದು ನಡೆಯಲಿರುವ ಬೃಹತ್ ರೈತ ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರುವ ಮೂಲಕ ಯಶಸ್ವಿಗೊಳಿಸಬೇಕು ಎಂದು ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ತಾಲೂಕು ಅಧ್ಯ ಮಹಾಂತಗೌಡ ಬಿರಾದಾರ ವಕೀಲರು ಮನವಿ ಮಾಡಿದರು.
ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಮಾವೇಶದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಡಿನ ಮಠಾಧೀಶರು, ರಾಜಕೀಯ ಧುರೀಣರು, ರೈತ ಮುಖಂಡರು ಸಮಾವೇಶದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಮೂರು ದಿನ ಕೃಷಿ ಮೇಳ, ಕೃಷಿ ತರಿಂದ ವಿಚಾರಗೋಷ್ಠಿ, ರೈತ ನಾಯಕ, ನೇಗಿಲ ಯೋಗಿ, ಕರುನಾಡು ರೈತ ರತ್ನ ಪ್ರಶಸ್ತಿ ಪ್ರದಾನ, ರೈತ ಗೀತೆ, ರೈತ ಕವಿಗೋಷ್ಠಿ, ಕೃಷಿ ಚಿತ್ರಕಲಾ ಸ್ಪರ್ಧೆ, ರೈತ ಹಾಗೂ ಕೃಷಿ ಕುರಿತ ರಂಗೋಲಿ ಸ್ಪರ್ಧೆ, ಹಂತಿಪದ, ಶ್ರೀಕೃಷ್ಣ ಪಾರಿಜಾತ, ಭಜನಾ ಜುಗಲ್ಬಂದಿ ಸೇರಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. 100ಕ್ಕೂ ಅಧಿಕ ಕೃಷಿಗೆ ಸಂಬಂಧಿಸಿದ ವ್ಯಾಪಾರಿ ಮಳಿಗೆಗಳು, ಪ್ರದರ್ಶನ, ಮಾರಾಟ ಇರಲಿದೆ ಎಂದು ತಿಳಿಸಿದರು.
ಪದಾಧಿಕಾರಿಗಳಾದ ಬಿದರಕುಂದಿಯ ಮುರಿಗೇಶ ಹಿರೇಮಠ(ಮುತ್ತು), ಮುದ್ದೇಬಿಹಾಳದ ಅಪ್ಪುಗೌಡ ಪಾಟೀಲ, ಹೊಕ್ರಾಣಿಯ ನಾಗಪ್ಪ ಬಿರಾದಾರ, ತಂಗಡಗಿಯ ರವೀಂದ್ರ ತುಪ್ಪದ ವಕೀಲರು, ಬಂಗಾರಗುಂಡದ ಪ್ರಭುಗೌಡ ಗೌಡರ ವಕೀಲರು, ಮದರಿಯ ಬಸನಗೌಡ ಗೌಡರ ಇದ್ದರು.