

ದೇವರಹಿಪ್ಪರಗಿ: ಕೆರೂಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ನೀಡುವಂತೆ ಆಗ್ರಹಿಸಿ ರೈತರು ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯ ಸಿದ್ದು ಬುಳ್ಳಾ ಮಾತನಾಡಿ, 2024&25 ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರೈತರು ತೊಗರಿ ಬಿತ್ತಿದ್ದರು. ಮಳೆ ಕೊರತೆಯಿಂದ ಬಹುತೇಕ ಬೆಳೆೆ ಹಾನಿಯಾಗಿದೆ. ತೊಗರಿ ಬೆಳೆಗೆ ವಿಮೆ ತುಂಬಿದ್ದರೂ ಇಲ್ಲಿವರೆಗೂ ರೈತರಿಗೆ ವಿಮೆ ನಿಡಿಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ವಿಮೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ 15 ದಿನದೊಳಗಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಎಪಿಎಂಸಿ ಮಾಜಿ ಅಧ್ಯ ಪ್ರಕಾಶ ಪಡಶೆಟ್ಟಿ, ಮಲಕಾಜಯ್ಯ ಹಿರೇಮಠ, ಮಲ್ಲು ಚಟ್ಟರಕಿ, ಶಂಕರಗೌಡ ಪಾಟೀಲ, ಸಿದ್ಧನಗೌಡ ಪೊಲೇಶಿ, ಅಂಬಾಬಾಯಿ ರಜಪುತ, ಸೋಮಬಾಯಿ ಕರೆತಪ್ಪಗೋಳ, ಮಡೆವ್ವ ನಂದ್ಯಾಳ, ಕಲ್ಯಾಣಯ್ಯ ಹಿರೇಮಠ, ವಿನಾಯಕ ಹಿರೇಮಠ, ಮಹಾದೇವಪ್ಪ ಬರಗಲ್, ಸಿದ್ದಣ್ಣ ಪೂಜಾರಿ ಹಾಗೂ ರೈತರು ಪಾಲ್ಗೊಂಡಿದ್ದರು.