ವರುಣನ ಆರ್ಭಟದಲ್ಲೂ "ಬಂಡೆ' ಗರ್ಜನೆ

Even in the roar of Varuna, the roar
ಬಸವನಬಾಗೇವಾಡಿ ತಾಲೂಕಿನ ಕೊಲ್ಹಾರ ಪಟ್ಟಣದಲ್ಲಿ ಹಂತಿ ಹೊಡೆಯುವ ಮೂಲಕ ರೈತರನ್ನು ಡಿಸಿಎಂ ಡಿ.ಕೆ. ಶಿವಕುಮಾರ ಪ್ರೋತ್ಸಾಹಿಸಿದರು.
Published on

ಬಸವನಬಾಗೇವಾಡಿ : ಮಳೆ ಲೆಕ್ಕಿಸದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಕಾರ್ಯಕ್ರಮದಲ್ಲಿ ಅಪಾರ ಜನರು ಪಾಲ್ಗೊಂಡಿದ್ದರು. ಮಳೆಯ ಮಧ್ಯೆಯೂ ಕೃಷಿ ಸಾಂಸತಿಕ ವೈಭವ ಸಾರುವ ಹಂತಿ ಹೊಡೆದ ಡಿ.ಕೆ. ಶಿವಕುಮಾರ ಅವರು ಬಂಜಾರಾ ಪಾರಂಪರಿಕ ಉಡುಗೆ ಹಾಗೂ ಕನ್ನಡ ಶಾಲಿನ ಸತ್ಕಾರಕ್ಕೆ ಭಾಜನರಾದರು.

ಕೊಲ್ಹಾರ ಪಟ್ಟಣದಲ್ಲಿ ಶುಕ್ರವಾರ ಜರುಗಿದ ಕಂದಾಯ, ಜಲ ಸಂಪನ್ಮೂಲ, ಆರೋಗ್ಯ, ತಾಂತ್ರಿಕ ಶಿಣ, ಪಶು ಸಂಗೋಪನಾ, ಪ.ಪಂ. ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಜನಸ್ತೋಮ ಪಾಲ್ಗೊಂಡಿತ್ತು. ಜನರ ಪ್ರೀತಿಗೆ ಡಿಕೆಶಿ ಮನಸೋತರು.

ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವರುಣನ ಆರ್ಭಟ ಶುರುವಾಯಿತು. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಎಸ್​.ಆರ್​. ಪಾಟೀಲ ಮಾತನಾಡಿದ ನಂತರ ಡಿಕೆ ಶಿವಕುಮಾರ ಮಾತು ಆರಂಭಿಸಿದರು.

ಶಿವಾನಂದ ಪಾಟೀಲ ಜನಾನುರಾಗಿ ನಾಯಕ ಎಂಬುದಕ್ಕೆ ಸುರಿವ ಮಳೆಯನ್ನು ಲೆಕ್ಕಿಸದೆ ಸೇರಿದ ಜನಸ್ತೋಮವೇ ಸಾ ಎಂದು ಡಿಕೆಶಿ ಬಣ್ಣಿಸಿದರು.

25 ವರ್ಷದ ಬಳಿಕೆ ಪಟ್ಟಣದಲ್ಲಿ ಇಂಥ ಅಭೂತಪೂರ್ವ ಕಾರ್ಯಕ್ರಮ ನಡೆಯುತ್ತಿದ್ದು, ಈ ಸುಂದರ ಕ್ಷಣಕ್ಕೆ ಸಹಸ್ರಾರು ಜನರು ಸಾಯಾಗಿದ್ದರು. ಡಿ.ಕೆ. ಶಿವಕುಮಾರ ಭಾಷಣ ಆರಂಭಕ್ಕೂ ಮುನ್ನ ಬಸವಣ್ಣ, ಪುರಂದರದಾಸರ ಹಾಗೂ ಬಸವಾದಿ ಶರಣರ ವಚನಗಳ ಸಾರಾಂಶವನ್ನು ಹೇಳಿದ್ದು ವಿಶೇಷವಾಗಿತ್ತು.

ಸುಗಮ ಸಂಗೀತ, ಜನಪದ ಕಲಾವಿದರ ಸಂಗೀತ ಪ್ರದರ್ಶನ, ಜೋಳದ ತೆನೆಯಿಂದ ಸಿಂಗಾರಗೊಂಡಿದ್ದ ವೇದಿಕೆಯಲ್ಲಿ ಗ್ರಾಮೀಣ ಬದುಕಿನ ನೈಜ ಸೌಂದರ್ಯ ಅನಾವರಣಗೊಂಡಿತ್ತು.

ಬಂಜಾರಾ ಸಮುದಾಯವರು ಡಿ.ಕೆ. ಶಿವಕುಮಾರ ಅವರಿಗೆ ತಮ್ಮ ಸಾಂಪ್ರದಾಯಿಕ ಉಡುಪು ತೊಡಿಸಿ, ಪಾರಂಪರಿಕ ಕನ್ನಡಿಯಿಂದ ರೂಪಿಸಿದ್ದ ಶಾಲು ಹಾಗೂ ಮೈಸೂರು ಪೇಟಾ ತೊಡಿಸಿ ಸತ್ಕರಿಸಿದ್ದು ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net