

ಸಿಂದಗಿ: ಪುರಸಭೆ ಕೊನೆಯ ಅವಧಿಯ ಆರು ತಿಂಗಳಿನ ಆಡಳಿತಕ್ಕೆ ಅಧ್ಯರಾಗಿ ಡಾ.ಶಾಂತವೀರ ಮನಗೂಳಿ ಹಾಗೂ ಉಪಾಧ್ಯರಾಗಿ ಸಂದೀಪ ಚೌರ್ ಅವಿರೋಧ ಆಯ್ಕೆಯಾಗಿದ್ದಾರೆ.
ಮೇ 16ರಂದು ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯ ರಾಜಣ್ಣ ನಾರಾಯಣಕರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಬುಧವಾರ ಅಧ್ಯ ಹಾಗೂ ಉಪಾಧ್ಯರ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಅಧ್ಯ ಸ್ಥಾನಕ್ಕೆ ಹಾಸಿಂಪೀರ ಆಳಂದ ಹಾಗೂ ಡಾ. ಶಾಂತವೀರ ಮನಗೂಳಿ ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯ ಸ್ಥಾನಕ್ಕೆ ಸಂದೀಪ ಭೀಮಪ್ಪ ಚೌರ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಾಸಿಂಪೀರ ಆಳಂದ ಅವರು ನಾಮಪತ್ರ ಹಿಂಪಡೆದ ಕಾರಣ ಅಧ್ಯ ಹಾಗೂ ಉಪಾಧ್ಯ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಡಾ.ಪ್ರದಿಪ ಕುಮಾರ ಹಿರೇಮಠ ೂಷಿಸಿದರು.
ಸದಸ್ಯರಾದ ವಿಜಯಲಕ್ಷಿ$್ಮ ಗಿರೀಶ ನಾಗೂರ ಗೈರಾಗಿದ್ದರು. ಇನ್ನುಳಿದ 22 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಅಧ್ಯರಾಗಿ ಆಯ್ಕೆಯಾದ ಡಾ.ಶಾಂತವೀರ ಮನಗೂಳಿ ಮಾತನಾಡಿ, ಶಾಸಕರ ನಿರ್ದೇಶನ ಹಾಗೂ ಸದಸ್ಯರ ಬೆಂಬಲದಿಂದ ಸಿಕ್ಕಿದೆ. ಎಲ್ಲ ವಾರ್ಡಗಳ ಅಭಿವೃದ್ಧಿಗಾಗಿ ಶಾಸಕರೊಂದಿಗೆ ಪೌರಾಡಳಿತ ಇಲಾಖೆ ಸಚಿವರನ್ನು ಭೇಟಿ ಮಾಡಿ, ಅಭಿವೃದ್ಧಿಗೆ ಅನುದಾನ ತರುವುದರ ಜತೆಗೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಪುರಸಭೆ ಸದಸ್ಯ ಶ್ರೀಶೈಲ ಬೀರಗೊಂಡ, ಭಾಗವ್ವ ಡೋಣೂರ, ಭೀಮಾ ಕಲಾಲ, ಉಮಾಬಾಯಿ ಸುಲ್ಪಿ, ಕಲಾವತಿ ಕಡಕೋಳ, ತಹಶೀನ್ ಮುಲ್ಲಾ, ಬಾದಶಶಾಸಾಬ ತಾಂಬೋಳಿ, ಹಣಮಂತ ಸುಣಗಾರ, ಬಸಮ್ಮ ಸಜ್ಜನ, ಗೊಲ್ಲಾಳ ಬಂಕಲಗಿ, ನಾಯ್ಕೋಡಿ ಮಹಾದೇವಿ, ಮಹಾಂತೇಶ ಬಿರಾದಾರ, ಪಾರ್ವತಿ ದುರ್ಗಿ, ಬಸವರಾಜ ಯರನಾಳ, ಶರಣಗೌಡ ಪಾಟೀಲ, ನಾಮನಿರ್ದೇಶಿತ ಸದಸ್ಯರಾದ ಸಿದ್ದು ಮಲ್ಲೇದ, ಸದಾನಂದ ಕುಂಬಾರ, ಚನ್ನಪ್ಪ ಗೋಣಿ, ಸಾಯಬಣ್ಣ ಪುರದಾಳ, ಅಬ್ದುಲರಹಿಮಾನ ದುದನಿ ಉಪಸ್ಥಿತರಿದ್ದರು.