ರೈತರಿಂದ ಕೃಷಿ ಪಂಪ್​ಸೆಟ್​ ನಿರ್ವಹಣಾ ವೆಚ್ಚ ಪಡೆಯದಿರಿ

Do not charge farmers for maintenance costs of agricultural pump sets.
ರೈತರಿಂದ ಕೃಷಿ ಪಂಪ್​ಸೆಟ್​ ನಿರ್ವಹಣಾ ವೆಚ್ಚ ಪಡೆಯಬಾರದು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಹೆಸ್ಕಾಂ ಅಧೀಕ ಅಭಿಯಂತರ ಜಿ.ಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಿದರು. ವಿಠ್ಠಲ ಬಿರಾದಾರ, ಮಲ್ಲಿಗೆಪ್ಪಗೌಡ ಪಾಟೀಲ, ರಾಜೇಸಾಬ ಹಳ್ಳೂರ ಸಂಗನಗೌಡ ಪಾಟೀಲ ಮಹದೇವಪ್ಪ ಬಿರಾದಾರ ಇದ್ದರು.
Published on

ವಿಜಯಪುರ: ಕೃಷಿ ಪಂಪ್​ಸೆಟ್​ಗಳ ನಿರ್ವಹಣಾ ವೆಚ್ಚ ರೈತರಿಂದ ಪಡೆಯಬಾರದು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಹೆಸ್ಕಾಂ ಅಧೀಕ ಅಭಿಯಂತರ ಜಿ.ಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಿದರು.

ರೈತರ ಕೃಷಿ ಪಂಪ್​ಸೆಟ್​ಗಳನ್ನು ಸಕ್ರಮ ಗೊಳಿಸಲು ಈ ಹಿಂದೆ 50ರೂ.ಶುಲ್ಕ ನಿಗದಿಪಡಿಸಲಾಗಿತ್ತು. ಆದರೆ ಈಗ ಪ್ರತಿ ಎಚ್​.ಪಿ.ಗೆ 1400 ರೂ. ಮತ್ತು 10,000 ರೂ. ನಿರ್ವಹಣಾ ವೆಚ್ಚ ಪಾವತಿಸುವಂತೆ ಸರ್ಕಾರ ಹೇಳುತ್ತಿದೆ. ಇದು ರೈತರಿಗೆ ಹೊರೆಯಾಗುತ್ತದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ರೈತ ಮುಖಂಡರಾದ ವಿಠ್ಠಲ ಬಿರಾದಾರ, ಮಲ್ಲಿಗೆಪ್ಪಗೌಡ ಪಾಟೀಲ, ರಾಜೇಸಾಬ ಹಳ್ಳೂರ ಸಂಗನಗೌಡ ಪಾಟೀಲ ಮಹದೇವಪ್ಪ ಬಿರಾದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net