

ಮುದ್ದೇಬಿಹಾಳ: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರದ ಸೌಲಭಅವರಿಗೆ ತಲುಪಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ, ಸಬಲೀಕರಣ ಮಂತ್ರಾಲಯದಿಂದ ಮಂಜೂರಾದ ಸಾಧನ, ಸಲಕರಣೆಗಳನ್ನು ಮುದ್ದೇಬಿಹಾಳ, ತಾಳಿಕೋಟೆ ತಾಲೂಕು ವ್ಯಾಪ್ತಿಯ ಅರ್ಹ ವಿಕಲಚೇತನರಿಗೆ ವಿತರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ಮಾತನಾಡಿ, ಯೋಜನೆ ಅಡಿ ಬೆಂಗಳೂರಿನ ಅಲಿಮ್ಯೋ ಸಂಸ್ಥೆಯವರು ಐಡ್ಿ (ಎಐಡಿಎ್) ಯೋಜನೆಯ ಸಾಮಾಜಿಕ ಆಧರಿತಾ ಶಿಬಿರ ಏರ್ಪಡಿಸಿ, ವಿಕಲಚೇತನರ ಆರೋಗ್ಯ ತಪಾಸಣೆ ನಡೆಸಿ ಸಲಕರಣೆ ವಿತರಣೆಯ ಹೊಣೆ ನಿರ್ವಹಿಸುತ್ತಿದ್ದಾರೆ. ಅರ್ಹರನ್ನು ಆಯಾ ಎಂಆರ್ಡಬ್ಲು, ಗ್ರಾಪಂ ಮಟ್ಟದಲ್ಲಿರುವ ವಿಆರ್ಡಬ್ಲುಗಳ ಮೂಲಕ ಆಯ್ಕೆ ಮಾಡಲಾಗಿದೆ ಎಂದರು.
ಎರಡೂ ತಾಲೂಕುಗಳ 270 ಅರ್ಹ ವಿಕಲಚೇತನರಿಗೆ ಬೈಸಿಕಲ್, ಬ್ಯಾಟರಿಚಾಲಿತ ವ್ಹೀಲ್ಚೇರ್, ವ್ಹೀಲ್ಚೇರ್, ಕ್ಯಾಲಿಪರ್, ಬಗಲು ಬಡಿಗೆ, ವಾಕಿಂಗ್ ಸ್ಟಿಕ್, ವಾಕರ್, ಕಮೋಡ್ ಚೇರ್, ಶ್ರವಣ ಸಾಧನ ಯಂತ್ರ ಸೇರಿ ಅಗತ್ಯ ಸಲಕರಣೆಗಳನ್ನು ವಿತರಿಸಲಾಯಿತು.
ಸಂಸ್ಥೆಯ ಜನರಲ್ ಮ್ಯಾನೇಜರ್ ಆದರ್ಶ, ಎಂಆರ್ಡಬ್ಲುನ ಎಸ್.ಕೆ.ಘಾಟಿ, ಸಂಸ್ಥೆಯ ಜ್ಯೂನಿಯರ್ ಮ್ಯಾನೇಜರ್ ಅಂಕಿತ್ರಾಯ್, ಸಹಾಯಕ ಸಿಡಿಪಿಒ ಶರಣಮ್ಮ ದೇಸಾಯಿ, ಅರದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ತಾಪಂ ಸಹಾಯಕ ನಿರ್ದೇಶಕ ಖೂಬಾಸಿಂಗ್ ರಾಠೋಡ, ಆನಂದ ಬಿರಾದಾರ ಉಪಸ್ಥಿತರಿದ್ದರು.