ವೈಭವದಿಂದ ನೆರವೇರಿದ ಚೌಡೇಶ್ವರಿದೇವಿ ಜಾತ್ರೆ

Chowdeshwari Devi fair celebrated with splendor
ಸಿಂದಗಿ ಪಟ್ಟಣದಲ್ಲಿ ಗ್ರಾಮ ದೇವತೆ ಚೌಡೇಶ್ವರಿ ದೇವಿಯ ಮೆರವಣಿಗೆ ನಡೆಯಿತು.
Published on

ಸಿಂದಗಿ: ಪಟ್ಟಣದಲ್ಲಿ ಮಂಗಳವಾರ ಗ್ರಾಮ ದೇವತೆ ಚೌಡೇಶ್ವರಿ ದೇವಿಯ ಜಾತ್ರೆ ವೈಭವದಿಂದ ನಡೆಯಿತು.

ಸಂಜೆ ದೇವಿಯು ಪಟ್ಟಣದ ಕುಲದವರ ಮನೆಯಲ್ಲಿ ತೂಗುಯ್ಯಾಲೆ ಆಡಿ, ನೀಲಗಂಗಾ ದೇವಸ್ಥಾನದ ಬಳಿ ಹಾಕಿದ್ದ ಬೇವಿನ ಚಪ್ಪರದ ಮಂಟಪದಲ್ಲಿ ಮಜ್ಜಿಗೆ ಕಟೆದು, ಅಗ್ನಿಪ್ರವೇಶ ಮಾಡಿ, ಚೌಡಿಯ ಮುಂದೆ ಊರ ಗೌಡರೊಂದಿಗೆ ಕೋಲಾಟ ಆಡಿ, ಭಕ್ತರ ಮನೆಗಳಿಗೆ ತೆರಳಿ, ಉಡಿಯಕ್ಕಿ ಹಾಕಿಸಿಕೊಂಡಳು.

ಮದ್ದಳೆ ತಂಡ, ನವಿಲು ಕುಣಿತ, ವೀರಗಾಸೆ, ನಂದಿಕೋಲ, ಡೊಳ್ಳು ಕುಣಿತದ ತಂಡಗಳು ಮೆರವಣಿಗೆಗೆ ಮೆರಗು ತಂದುಕೊಟ್ಟವು. ಅಗಸರ ಮನೆತನ, ಸುಣಗಾರ ಮನೆತನ ಸೇರಿದಂತೆ ಇತರ ಸಮುದಾಯದ ಕುಟುಂಬಗಳು ತಮ್ಮ ವಂಶ ಪಾರ್ಯಂಪರ ಸೇವೆ ಸಮರ್ಪಿಸಿ ಕತಾರ್ಥರಾದರು.

ಚಿದಾನಂದ ಕುಂಬಾರ, ಸಿದ್ದಪ್ಪ ಕುಂಬಾರ, ಉದಯ ಕುಂಬಾರ, ಸಿದ್ರಾಮ ಕುಂಬಾರ, ಸಚಿನ್​ ಕುಂಬಾರ, ಶಿವಬಸು ಕುಂಬಾರ, ಶಾಂತವೀರ ಕುಂಬಾರ, ಕಲ್ಲಪ್ಪ ಕುಂಬಾರ, ಸದಾಶಿವ ಕುಂಬಾರ, ಶಾಂತಮ್ಮ ಕುಂಬಾರ, ಸಂಗಪ್ಪ ಕುಂಬಾರ, ಶ್ರೀಕಾಂತ ಕುಂಬಾರ, ರವಿ ನಾಗೂರ, ಸಿದ್ದಪ್ಪ ಭೀಮಪ್ಪ ಕುಂಬಾರ, ನಿಂಗಪ್ಪ ಅಗಸರ, ಲಕ್ಕಪ್ಪ ಸುಣಗಾರ, ಗುರಸಂಗಪ್ಪ ಕುಂಬಾರ, ಯಮನೂರಿ ಕುಂಟೋಜಿ, ಸಂಗಣ್ಣ ಕುಂಬಾರ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net