

ದೇವರಹಿಪ್ಪರಗಿ: ಪಟ್ಟಣದಲ್ಲಿ ಮಂಗಳವಾರ ಚೌಡೇಶ್ವರಿ ದೇವಿ ಜಾತ್ರೆ ಸಂಭ್ರಮದಿಂದ ಜರುಗಿತು.
ಹರಕೆ ಹೊತ್ತ ಮಹಿಳೆಯರು, ಮುತೈದಿಯರು ಉಡಿ ತುಂಬಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಂಜೆ ಅರ್ಚಕರು ದೇವಿಯ ಮುಖವಾಡ ಧರಿಸಿ ಬಜಾರ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೋಲಾಟ ಕುಣಿತದ ಪ್ರದರ್ಶನ ಗಮನ ಸೆಳೆಯಿತು. ಮೆರವಣಿಗೆಯು ಸದಯ್ಯನಮಠದ ಗಂಗಾಸ್ಥಳ ತಲುಪಿ ಮರಳಿ ದೇವಸ್ಥಾನ ತಲುಪಿತು.
ಪಟ್ಟಣ ಪಂಚಾಯಿತಿ ಸದಸ್ಯ ಮಂಗಳೇಶ ಕಡ್ಲೇವಾಡ, ಪ್ರಮುಖರಾದ ಶಿವಾನಂದ ಕುಂಬಾರ, ಕಾಶೀನಾಥ ಸೌದಿ, ಬಸವರಾಜ ಕುಂಬಾರ, ಶೇಖಪ್ಪ ವಾಡೇದಮನಿ, ಸಿದ್ದು ಕುಂಬಾರ, ಸಂಪತ್ ಜಮಾದಾರ, ಕಾಶೀನಾಥ ಕುಂಬಾರ, ಚಿದಾನಂದ ಕುಂಬಾರ, ಭೀಮರಾಯ ಕುಂಬಾರ, ಗಿರಿಮಲ್ಲ ಕುಂಬಾರ ಸೇರಿದಂತೆ ಪಟ್ಟಣದ ಭಕ್ತರು ಇದ್ದರು.