

ರೇವತಗಾಂವ: ಶೋಷಿತರು, ದೀನ&ದಲಿತರು ಹಾಗೂ ಮಹಿಳೆಯರು ಸ್ವಾತಂತ್ರ$್ಯವಿಲ್ಲದ ಸಂದರ್ಭದಲ್ಲಿ ಬಸವಣ್ಣನವರು ಸಮಾನತೆ ತತ್ವ ಪ್ರತಿಪಾದಿಸಿದ್ದಾರೆ ಎಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯ ಅಶೋಕ ಬಿಜ್ಜರಗಿ ಹೇಳಿದರು.
ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ,ಲಿಂಗ ಹಾಗೂ ಸಂಪತ್ತಿನ ಅಸಮಾನತೆ ತೊಡೆದುಹಾಕುವಲ್ಲಿ ಅನುಭವ ಮಂಟಪದ ಕೊಡುಗೆ ಅಪಾರವಾಗಿದೆ ಎಂದರು.
ಮುಖ್ಯಗುರು ಆರ್.ಎನ್.ಹತ್ತಳ್ಳಿ, ಎಸ್.ಡಿ.ಆದಿಗೊಂಡೆ, ಎಸ್.ಜೆ.ಬಿಜ್ಜರಗಿ, ಎಂ.ಕೆ.ಬಗಲಿ, ಪಿ.ಎ.ವಾಲಿಕಾರ, ಎ.ಎಚ್.ಬಗಲಿ, ಬಸವರಾಜ ಪೂಜಾರಿ, ಸಿದ್ರಾಮ ಪೊದ್ಧಾರ, ವಿವೇಕ ನಡಗೇರಿ ಉಪಸ್ಥಿತರಿದ್ದರು.