ನೀರಿನ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಮನವಿ

Appeal to solve water problem
ಇಂಡಿ: ಚಿಕ್ಕಬೇವನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈಲು ನಿಲ್ದಾಣ ವಾರ್ಡಿನಲ್ಲಿ ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳು ತಾ.ಪಂ. ಇಒಗೆ ಮನವಿ ಸಲ್ಲಿಸಿದರು.
Published on

ಇಂಡಿ: ತಾಲೂಕಿನ ಚಿಕ್ಕಬೇವನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇಂಡಿ ರೈಲು ನಿಲ್ದಾಣ ವಾರ್ಡಿನಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಬಡಾವಣೆೆ ನಿವಾಸಿಗಳು ತಾ.ಪಂ. ಇಒ ನಂದೀಪ ರಾಠೋಡ ಅವರಿಗೆ ಮನವಿ ಸಲ್ಲಿಸಿದರು.

ನೀರು ಸರಬರಾಜು ಮಾಡುವ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಮಯಕ್ಕೆ ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಆರೋಪಿಸಿದರು.

ನೀರು ಬಿಡುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಾ.ಪಂ ಇಒ ನಂದೀಪ ರಾಠೋಡ ಭರವಸೆ ನೀಡಿದರು.

ಪ್ರಮುಖರಾದ ವೆಂಕಟೇಶ ಭೈರಾಮಡಗಿ, ಬಾಬು ಅತ್ತಾರ, ಮೈಬೂಬ ಖಾಜಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಅಮೀನಾ ಮಣ್ಣೂರ, ಪರ್ವೀನ್​ ಚಪ್ಪರಬಂದ, ರೇಷ್ಮಾ ಮಾಶಾಳಕರ, ಬಸವರಾಜ ಅಗಸರ, ಜಗದೇವಿ ಲಚ್ಯಾಣ, ಪ್ರಶಾಂತ ಉಪಾಸೆ ಉಪಸ್ಥಿತರಿದ್ದರು. ು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net