ಪರ್ಯಾಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

Adopt alternative farming methods
ಗೊವಿಂದರೆಡ್ಡಿ ಮೇದಕಿನಾಳ
Published on

ಢವಳಗಿ : ಮುಂಗಾರು ಹಂಗಾಮಿನಲ್ಲಿ ಮೇ ತಿಂಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, ರೈತರು ಬಿತ್ತಣಿಕೆಗೆೆ ಸಜ್ಜಾಗುತ್ತಿದ್ದಾರೆ. ಈ ಸಮಯದಲ್ಲಿ ಕೆಲ ಸಲಹೆಗಳನ್ನು ರೈತರು ಪಾಲಿಸಬೇಕು. ರೈತರು ಬಿತ್ತನೆ ಬೀಜವನ್ನು ಪರವಾನಗಿ ಹೊಂದಿರುವ ವಿತರಕರಿಂದ ಖರೀದಿಸಬೇಕು. ಶೇಖರಿಸಿದ ಬೀಜಗಳನ್ನು ಮೊಳಕೆ ಪರೀೆ ಮಾಡಿ ಬಿತ್ತನೆ ಮಾಡಬೇಕು. ಮತ್ತು ಕಳೆದ ಹಂಗಾಮಿನಲ್ಲಿ ತೊಗರಿ ಬಿತ್ತಿದ ಜಮೀನುಗಳಲ್ಲಿ ತೊಗರಿಯನ್ನು ಬಿಟ್ಟು ಪರ್ಯಾಯ ಬೆಳೆ ಬಿತ್ತಬೇಕು ಎಂದು ಕೃಷಿ ಅ-ಧಿಕಾರಿ ಗೊವಿಂದರೆಡ್ಡಿ ಮೇದಕಿನಾಳ ರೈತರಿಗೆ ಸಲಹೆ ನೀಡಿದ್ದಾರೆ.

ರೈತರು ರಸಾಯನಿಕ ಗೊಬ್ಬರವನ್ನು ಮೀತವಾಗಿ ಬಳಸಬೇಕು. ಭೂಮಿ ಬರಡಾಗುವುದನ್ನು ತಡೆಯುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಮಣ್ಣಿನಲ್ಲಿರುವ ಸೂಕ್ಷ$್ಮ್ಮ ಜೀವಿಗಳನ್ನು ಕಾಪಾಡಬೇಕು. ಎಲ್ಲ್ಲ ರೈತರು ಮುಂಗಾರು ಬೆಳೆ ಸಮೀೆ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net