

ಹೊರ್ತಿ: ಮಕ್ಕಳ ಬೆಳವಣಿಗೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ ಎಂದು ಸವೋರ್ದಯ ಸಂಸ್ಥೆ ಅಧ್ಯ ಮಲ್ಲಿಕಾರ್ಜುನ ಪೂಜಾರಿ ಹೇಳಿದರು.
ಗ್ರಾಮದ ಸವೋರ್ದಯ ಪದವಿ ಪೂರ್ವ ವಿಜ್ಞಾನ ಕಾಲೇಜ್ ಆವರಣದಲ್ಲಿ ವಿಶ್ವ ತಾಯಂದಿರ ದಿನಾಚರಣೆ ನಿಮಿತ್ತ ಸಂಸ್ಥೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಯಂದಿರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಪ್ರತಿ ಯಶಸ್ಸಿನಲ್ಲೂ ತಾಯಿ ಪ್ರಮುಖ ಪಾತ್ರ ವಹಿಸುತ್ತಾಳೆ. ಪ್ರತಿ ಸಾಧಕನ ಹಿಂದೆ ತಾಯಿ ಆತ್ಮವಿಶ್ವಾಸವಾಗಿ ನಿಲ್ಲುತ್ತಾಳೆ. ಪ್ರತಿಯೊಬ್ಬರೂ ತಾಯಿಯನ್ನು ಗೌರವಿಸಬೇಕು ಎಂದರು.
ಶಿಕ ಪ್ರಕಾಶ ಬೊಮ್ಮನಳ್ಳಿ ಮಾತನಾಡಿ, ಮಕ್ಕಳ ಪಾಲಿಗೆ ತಾಯಿಯೇ ದೇವರು. ವಿದ್ಯಾರ್ಥಿಗಳು ತಂದೆ, ತಾಯಿಯನ್ನು ಗೌರವದಿಂದ ಕಾಣಬೇಕು ಎಂದರು.
ರಮೇಶ ಬಲ್ಲದ ಮಾತನಾಡಿದರು. ಇದಕ್ಕೂ ಮುನ್ನ ಸಿದ್ಧೇಶ್ವರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಗ್ರಾಮದ ಹತ್ತು ಜನ ಹಿರಿಯ ತಾಯಂದಿರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮ ನಡೆದವು.
ಕಾಲೇಜ್ ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.