ಮೀನು ಹಿಡಿಯಲು ಹೋಗಿ ನೀರು ಪಾಲಾದ ವ್ಯಕ್ತಿ

A man who went fishing and drowned
ತುಕ್ಕಪ್ಪ ಶಂಕರೆಪ್ಪ ಗೌಡರ
Published on

ಇಂಡಿ: ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ವ್ಯಕ್ತಿಯೊಬ್ಬ ನೀರು ಪಾಲಾಗಿದ್ದು, ಇದುವರೆಗೂ ಶವ ಪತ್ತೆಯಾಗಿಲ್ಲ.

ತಾಲೂಕಿನ ಹಂಜಗಿ ಕೆರೆಯಲ್ಲಿ ಈ ಟನೆ ನಡೆದಿದ್ದು, ಹಂಜಗಿ ಗ್ರಾಮದ ತುಕ್ಕಪ್ಪ ಶಂಕರೆಪ್ಪ ಗೌಡರ (47) ಹಾಗೂ ಆನಂದ ಪೂಜಾರಿ (30) ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು ಎಂದು ತಿಳಿದು ಬಂದಿದೆ.

ತುಕ್ಕಪ್ಪ ಗೌಡರ ಕೆರೆಯಲ್ಲಿ ಮುಳುಗಿದ್ದಾನೆ ಎಂದು ಆನಂದ ಪೂಜಾರಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ. ಗ್ರಾಮಸ್ಥರು ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿ ಅಗ್ನಿಶಾಮಕದವರಿಗೆ ಮಾಹಿತಿ ನೀಡಿದ್ದಾರೆ.

ಗುರುವಾರ ಬೆಳಗ್ಗೆ 8ರಿಂದಲೇ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ ಶವ ಇನ್ನೂ ಪತ್ತೆಯಾಗಿಲ್ಲ. ಶುಕ್ರವಾರ ಶೋಧ ಕಾರ್ಯ ಮುಂದುವರಿಸಲಾಗುವುದು ಎಂದು ಅಗ್ನಿ ಶಾಮಕ ಸಿಬ್ಬಂದಿ ಡಿ.ಎಸ್​. ಪೂಜಾರಿ ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ಡಿ.ಎಸ್​.ಪೂಜಾರಿ, ನೇತೃತ್ವದಲ್ಲಿ 8 ಜನ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಜೆಡಿಎಸ್​ ಮುಖಂಡ ಬಿ.ಡಿ. ಪಾಟೀಲ, ಸಿದ್ದು ಡಂಗಾ ಸೇರಿದಂತೆ ಗ್ರಾಮಸ್ಥರು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಈಜು ತರನ್ನು ಕರೆಯಿಸಿ ಶವ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.

ಇಂಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಟನೆ ಸಂಭವಿಸಿದ್ದು, ಇದುವರೆಗೂ ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net