ವಂದಾಲದಲ್ಲಿ ವೈಭವದ ಅಂಬಾರಿ ಮಹೋತ್ಸವ

A glorious Ambari Mahotsav in Vandal
ವಂದಾಲ ಗ್ರಾಮದಲ್ಲಿ ಬನಶಂಕರಿ ದೇವಿಯ ಮೂರ್ತಿಯನ್ನು ಆನೆ ಅಂಬಾರಿಯಲ್ಲಿ ಕೂಡ್ರಿಸಿ ಮಂಗಳವಾರ ಮೆರವಣೀಗೆ ಮಾಡಲಾಯಿತು.
Published on

ಗೊಳಸಂಗಿ: ಬಾದಮಿ ಅಮವಾಸ್ಯೆ ನಿಮಿತ್ತ ವಂದಾಲ ಗ್ರಾಮದಲ್ಲಿ ಅಂಬಾರಿ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ವೈಭವದಿಂದ ಜರುಗಿದವು.

ಉದ್ಭವ ದೇವತೆಯೆಂದೇ ಅಸಂಖ್ಯಾತ ಭಕ್ತರ ಮನೆ ಮನದಾಳದಿ ನೆಲೆಯೂರಿದ ಬನಶಂಕರಿ ದೇವಿಗೆ ಲುನ್ಯಾಸ ಮತ್ತು ಮಹಾ ರುದ್ರಾಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮವನ್ನು ಬಾದಾಮಿಯ ಆಚಾರ್ಯರು ಬೆಳಗಿನ ಜಾವ ನೆರವೇರಿಸಿದರು. ಸಂಗಮೇಶ್ವರ ದೇವಸ್ಥಾನದಿಂದ ಹೊರಟ ಕೃತಕ ಆನೆ ಅಂಬಾರಿ ಮಹೋತ್ಸವದ ಮೆರವಣೀಗೆಯು ಪ್ರಮುಖ ಬೀದಿಗಳ ಮೂಲಕ ಬನಶಂಕರಿ ದೇವಸ್ಥಾನಕ್ಕೆ ತಲುಪಿತು.

ಮುತೈದಿಯರು ಬೃಹತ್​ ಕುಂಭಮೇಳ, ರಾಮದುರ್ಗದ ಕಲಾತಂಡದವರಿಂದ ಗೊಂಬೆ ಕುಣಿತ, ವಿವಿಧ ಕಲಾತಂಡಗಳು ಮೆರವಣೀಗೆಗೆ ಮೆರಗು ತಂದವು.

ಪವಾಡ ಬಸವೇಶ್ವರ ಮಠದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಪುರವಂತರ ವೀರಗಾಸೆ ಸೇವೆಯೊಂದಿಗೆ ಬನಶಂಕರಿ ದೇವಿಯ ಪಲ್ಲಕ್ಕಿ ಮಹೋತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net