ಭಕ್ತಿಯಿಂದ ಜರುಗಿದ ಉಡಿ ತುಂಬುವ ಕಾರ್ಯಕ್ರಮ

A devotional Udi filling program
ತಾಳಿಕೋಟೆಯಲ್ಲಿ ಶುಕ್ರವಾರ ಜರುಗಿದ ಜಾತ್ರೆ ನಿಮಿತ್ತ ಭಕ್ತರು ಗ್ರಾಮದೇವತೆ ಹಾಗೂ ವಿವಿಧ ದೇವಸ್ಥಾನಗಳಿಗೆ ತೆರಳಿ ಉಡಿ ತುಂಬಿದರು.
Published on

ತಾಳಿಕೋಟೆ: ಲೋಕಕಲ್ಯಾಣಾರ್ಥವಾಗಿ ಪಟ್ಟಣದಲ್ಲಿ ಪ್ರತಿವರ್ಷ ಆಚರಿಸುತ್ತಿರುವ ಗ್ರಾಮದೇವತೆಗೆ ಉಡಿತುಂಬುವ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಜರುಗಿತು.

ದ್ಯಾಮವ್ವದೇವಿ ಗ್ರಾಮದೇವಿ ಸೇವಾ ಸಮಿತಿ ನೇತೃತ್ವದಲ್ಲಿ ಜರುಗಿದ ಉಡಿ ತುಂಬುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಗ್ರಾಮದೇವಿಯ ಮಂದಿರದಿಂದ ಮೆರವಣಿಗೆ ಮೂಲಕ ಅಂಬಾಭವಾನಿ ಮಂದರಕ್ಕೆ ಹೋಗಿ ಭವಾನಿಗೆ ಉಡಿ ತುಂಬಿದರು. ಮರಳಿ ಮರಗಮ್ಮ ಮಂದಿರಕ್ಕೆ ಆಗಮಿಸಿ ದೇವಿಗೆ ಉಡಿ ತುಂಬಿ ಭಕ್ತಿ ಮೆರೆದರು.

ಅರ್ಚಕರಾದ ಶ್ರೀಶೈಲ ಬಡಿಗೇರ, ಗಂಗಾಧರ ಬಡಿಗೇರ, ಸಿದ್ದಣ್ಣ ಬಡಿಗೇರ, ಪ್ರಭು ಬಡಿಗೇರ, ನಾಗರಾಜ ಬಡಿಗೇರ, ವಿಶ್ವನಾಥ ಆಚಾರ್ಯ, ಮಂಜು ಬಡಿಗೇರ, ಕುಮಾರ ಬಡಿಗೇರ, ಪ್ರಜ್ವಲ ಬಡಿಗೇರ, ಭೀಮು ಬಡಿಗೇರ, ಚಿದಾನಂದ ಬಡಿಗೇರ ಹಾಗೂ ಗ್ರಾಮದ ಮುಖಂಡರು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net