ಇಂದಿನಿಂದ ಯರನಾಳ ವಿರಕ್ತಮಠ ಜಾತ್ರೆ

Yaranala Viraktamatha Fair from today
ಗುರು ಸಂಗನಬಸವ ಶ್ರೀಗಳು
Published on

ಬಸವನಬಾಗೇವಾಡಿ: ತಾಲೂಕಿನ ಯರನಾಳದ ವಿರಕ್ತಮಠದಲ್ಲಿ ಲಿಂ. ಶ್ರೀ ಪಂಪಾಪತಿ ಶಿವಯೋಗಿಗಳ ಜಾತ್ರೆ ನಿಮಿತ್ತ ಏ.1 ರಿಂದ 3ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಯರನಾಳ ಸಂಸ್ಥಾನ ವಿರಕ್ತಮಠದ ಶ್ರೀ ಗುರುಸಂಗನಬಸವ ಸ್ವಾಮಿಗಳು ತಿಳಿಸಿದ್ದಾರೆ.

ಏ.1 ರಂದು ರಾತ್ರಿ 7.30ಕ್ಕೆ ಪುರಾಣ ಮಂಗಲೋತ್ಸವ ಮತ್ತು ವಿಶ್ವದಾಸೋಹ ದಿನದ ಸಂಭ್ರಮಾಚರಣೆ ನಡೆಯಲಿದ್ದು, ಇಂಗಳೇಶ್ವರ ವಿರಕ್ತಮಠ ವಚನ ಶಿಲಾ ಮಂಟಪದ ಚನ್ನಬಸವ ಶ್ರೀಗಳು ಸಾನ್ನಿಧ್ಯ, ಯರನಾಳ ವಿರಕ್ತಮಠದ ಗುರು ಸಂಗನಬಸವ ಸ್ವಾಮೀಜಿ, ನಾವದಗಿಯ ರಾಜಗುರು ರಾಜೇಂದ್ರ ಒಡೆಯರ ನೇತೃತ್ವ ವಹಿಸುವರು.

ದೇವರಹಿಪ್ಪರಗಿ ಶಾಸಕ ರಾಜು ಗೌಡ ಪಾಟೀಲ, ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಸೋಮನಗೌಡ ಪಾಟೀಲ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಚಂದ್ರಶೇಖರ ಗೌಡ ಪಾಟೀಲ, ರಮೇಶ ಸೂಳಿಬಾವಿ, ಎ.ಎಂ. ಪಾಟೀಲ(ಉಕ್ಕಲಿ), ಡಾ. ಅಮರೇಶ ಮಿಣಜಗಿ ಉಪಸ್ಥಿತರಿರುವರು.

ಏ.2 ರಂದು ರಾತ್ರಿ7.30ಕ್ಕೆೆ ಜಾತ್ರೆ ಉದ್ಘಾಟನೆ, ಧರ್ಮಸಭೆ ನಡೆಯಲಿದೆ. ಬಂಥನಾಳದ ಬಸವಲಿಂಗ ಸ್ವಾಮಿಗಳು, ಯರನಾಳಮಠದ ಗುರುಸಂಗನಬಸವ ಸ್ವಾಮಿಜಿಗಳು, ಬೀಳಗಿಯ ಗುರುಪಾದೇಶ್ವರ ಶ್ರೀಗಳು, ಬಸವನಬಾಗೇವಾಡಿಯ ಸಿದ್ಧಲಿಂಗ ಶ್ರೀಗಳು, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು, ಆಳಂದದ ಸಿದ್ಧೇಶ್ವರ ಶಿವಾಚಾರ್ಯರು ಉಪಸ್ಥಿತರಿರುವರು. ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು.

ಏ.3 ರಂದು ಬೆಳಗ್ಗೆ 10.30ಕ್ಕೆ ಗುರು ಸಂಗನಬಸವ ಸ್ವಾಮಿಗಳ ಪಾದಪೂಜೆ, ಸಿಂಹಾಸನಾರೋಹಣ ಕಿರೀಟ ಧಾರಣೆ ನಡೆಯಲಿದೆ. ತಾಳಿಕೋಟೆ ಖಾಸ್ಗತೇಶ್ವರಮಠದ ಸಿದ್ಧಲಿಂಗ ದೇವರು, ಹೂವಿನ ಹಿಪ್ಪರಗಿ ಪತ್ರಿಮಠದ ದಾಾಯಣಿ ಅಮ್ಮ, ಜಮಖಂಡಿ ಓಲೇಮಠದ ಆನಂದ ದೇವರು, ಯರನಾಳ ಹಿರೇಮಠದ ಶಿವಪ್ರಸಾದ ದೇವರು ಉಪಸ್ಥಿತರಿರುವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net