

ಗೊಳಸಂಗಿ: ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಅಗತ್ಯ ಎಂದು ವೃತ್ತಿ ತರಬೇತಿ ಸಂಪನ್ಮೂಲ ವ್ಯಕ್ತಿ ರಾಜಶ್ರೀವಾದ್ಲಿ ಹೇಳಿದರು.
ಚನ್ನಮಲ್ಲಪ್ಪ ಚನ್ನವಿರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮದರ್ಜೆ ಪದವಿ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಸೆಲ್ ಸಹಯೋಗದಲ್ಲಿ ಉದ್ಯೋಗ ಕೌಶಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದರು.
ಪ್ಲೇಸ್ಮೆಂಟ್ ಸೆಲ್ ಸಂಯೋಜಕ ಪ್ರೊ.ಮಹ್ಮದ್ ಯೂನುಸ್, ಸಾಂಸತಿಕ ಟಕದ ಮುಖ್ಯಸ್ಥ ಪ್ರೊ.ಎಸ್.ಆರ್.ಕುಂಬಾರ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ.ಎಂ.ಎ.ಕುಡ್ಲಿಗಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥ ಶ್ರೀಶೈಲ ಬಬಲಾದ, ಮಹಾಂತೇಶ ಕಮತಗಿ, ಅಶೋಕ ಗುಡದಿನ್ನಿ, ಉಮೇಶ ಹೂಗಾರ ಉಪಸ್ಥಿತರಿದ್ದರು.
ಪ್ರಾಚಾರ್ಯ ಪ್ರೊ.ಎಸ್.ಎಸ್.ರಾಜಮಾನ್ಯ ಅಧ್ಯತೆ ವಹಿಸಿದ್ದರು.ಕೌಶಲ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.