ಹದಗೆಟ್ಟ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

Villagers demand construction of dilapidated road
ಹುಣಶ್ಯಾಳ ಕ್ರಾಸ್​ದಿಂದ ಗುತ್ತಿ ಬಸವಣ್ಣ ಕಾಲುವೆಯವರೆಗಿನ ರಸ್ತೆ ಸಂೂರ್ಣ ಹಾಳಾಗಿರುವ ದೃಶ್ಯ.
Published on

ದೇವರಹಿಪ್ಪರಗಿ: ಹುಣಶ್ಯಾಳ ಕ್ರಾಸ್​ನಿಂದ ಗುತ್ತಿ ಬಸವಣ್ಣ ಕಾಲುವೆಯವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

5.5 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಸವಾರರು ನರತಯಾತನೆ ಅನುಭವಿಸುತ್ತಿದ್ದಾರೆ. ಕಲಬುರಗಿ, ಯಾದಗಿರಿ, ಆಲಗೂರ, ಗೋಲಗೇರಿ, ಮಳ್ಳಿ, ಕೆಂಭಾವಿ, ಯಡ್ರಾಮಿ, ಶಹಾಪುರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.

ಶ್ರೀ ರ್ಸತೆ ನಿರ್ಮಿಸುವಂತೆ ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಮೈನೂದ್ಧಿನ್​ ಬಾಗವಾನ, ಶಫೀಕ್​ ಸಿಪಾಯಿ, ಶಂಕ್ರೆಪ್ಪ ಬಂಗಾರಗುಂಡ, ಶಕೀಲ್​ ಪೊಲಾಚಿ, ಮಹಮ್ಮದ್​ ಬಾಗವಾನ, ಮಾಂತೇಶ ಮುರುಕನಾಳ, ಸುಭಾಸರೆಡ್ಡಿ ದೇಸಾಯಿ, ಶರಣಗೌಡ ಪಾಟೀಲ, ಇಬ್ರಾಹಿಂ ಹವಾಲಾರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net