

ತಾಳಿಕೋಟೆ: ಸ್ಥಳಿಯ ವೀರಶೈವ ವಿದ್ಯಾವರ್ಧ ಸಂದ ಎಸ್.ಕೆ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿ ವಾಯುಪುತ್ರ ಪರಶುರಾಮ ಯಡಹಳ್ಳಿ, ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀೆಯಲ್ಲಿ (ಎನ್ಎಂಎಂಎಸ್) ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ವಿದ್ಯಾರ್ಥಿಗೆ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್ ಸ್ಪರ್ಧಾತ್ಮಕ ಪರೀೆಯಲ್ಲಿ 180ಕ್ಕೆ 109 ಅಂಕ ಪಡೆದು ತಾಳಿಕೋಟೆ&ಮುದ್ದೇಬಿಹಾಳ ಅವಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಿಷ್ಯ ವೇತನಕ್ಕೆ ಅರ್ಹನಾಗಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ವೀರಶೆವ ವಿದ್ಯಾವರ್ಧಕ ಸಂದ ಚೇರಮನ್ ವ್ಹಿ.ಸಿ. ಹಿರೇಮಠ(ಹಂಪಿಮುತ್ಯಾ), ಉಪಾಧ್ಯ ಬಿ.ಎನ್ ಹಿಪ್ಪರಗಿ, ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಹ ಕಾರ್ಯದರ್ಶಿ ಕೆ.ಎಸ್.ಮುರಾಳ, ಹೈಸ್ಕೂಲ್ ವಿಭಾಗದ ಅಧ್ಯ ಎಂ.ಜಿ.ಕತ್ತಿ, ಪದವಿಪೂರ್ವ ಕಾಲೇಜಿನ ಅಧ್ಯ ಎಂ.ಆರ್. ಕತ್ತಿ, ಉಪಪ್ರಾಚಾರ್ಯ ಜೆ.ಎಸ್. ಕಟ್ಟಿಮನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.