ನೀರು ಮಿತವಾಗಿ ಬಳಸಿ

Use water sparingly.
ಮುದ್ದೇಬಿಹಾಳದಲ್ಲಿ ಶಾಸಕ ಸಿ.ಎಸ್​.ನಾಡಗೌಡರ ಉಪಸ್ಥಿತಿಯಲ್ಲಿ ಪುರಸಭೆ ಸದಸ್ಯ ಮಹ್ಮದರಫೀಕ ದ್ರಾ ಶುದ್ಧ ನೀರಿನ ಟಕವನ್ನು ಉದ್ಘಾಟಿಸಿದರು. ಮಹೆಬೂಬ ಗೊಳಸಂಗಿ ಇನ್ನಿತರರು ಇದ್ದರು.
Published on

ಮುದ್ದೇಬಿಹಾಳ: ಬೇಸಿಗೆ ಪ್ರಾರಂಭಗೊಂಡಿದ್ದು, ಸಾರ್ವಜನಿಕರು ಶುದ್ಧ ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು. ನಿತ್ಯದ ಬಳಕೆಯ ನೀರನ್ನು ಪೋಲು ಮಾಡಬಾರದು ಎಂದು ಶಾಸಕ ಸಿ.ಎಸ್​.ನಾಡಗೌಡ ಅಪ್ಪಾಜಿ ಹೇಳಿದರು.

ಇಲ್ಲಿನ ಬಸವನಗರದಲ್ಲಿ ಪುರಸಭೆಯ 2019&20ನೇ ಸಾಲಿನ 14ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನದಡಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಟಕವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಪುರಸಭೆ ಸದಸ್ಯ ಮಹ್ಮದ್​ರಫೀಕ ದ್ರಾ ಸೇರಿದಂತೆ ಆಯಾ ವಾರ್ಡ ಸದಸ್ಯರು ತಮ್ಮ ವಾರ್ಡಗಳಲ್ಲಿ ವಿಶೇಷ ಕಾಳಜಿ ವಹಿಸಿ ಟಕ ಸ್ಥಾಪಿಸಿದ್ದಾರೆ. ಇವುಗಳ ಸದುಪಯೋಗ ಆಗಬೇಕು. ನಿರ್ವಹಣೆ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದರು.

ಪುರಸಭೆ ಅಧ್ಯ ಮಹಿಬೂಬ ಗೊಳಸಂಗಿ, ಪುರಸಭೆ ಸದಸ್ಯರಾದ ರಫೀಕ ದ್ರಾ, ಶಿವು ಶಿವಪೂರ, ವೀರೇಶ ಹಡಲಗೇರಿ, ಮಾಜಿ ಸೆನಿಕರ ಸಂದ ಅಧ್ಯ ನಾನಪ್ಪ ನಾಯಕ, ಗುರುಪ್ಪ ತಾಡಪತ್ರಿ, ರಫೀಕ ಹಳ್ಳಿ, ಮೆಹಬೂಬ್​ ಡಮನಿ, ಮುನ್ನಾ ಹಡಗಲಿ, ಮೂಲಿಮನಿ, ಮಲ್ಲಿಕಾರ್ಜುನ ಸೊನ್ನದ, ಪವಡೆಪ್ಪ ನಾಯ್ಕೋಡಿ, ಸಮೀರ್​ ದ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net