ವೈಭವದ ಕಾಳಿಕಾದೇವಿ ಜಾತ್ರೆ

The glorious Kalikadevi fair
ತಾಳಿಕೋಟೆ ಪಟ್ಟಣದಲ್ಲಿ ಕಾಳಿಕಾದೇವಿ ಜಾತ್ರೆ ನಿಮಿತ್ತ ಸುಮಂಗಲೆಯರ ಕುಂಭ ಮೇಳದೊಂದಿಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು.
Published on

ತಾಳಿಕೋಟೆ: ಪಟ್ಟಣದಲ್ಲಿ ಕಾಳಿಕಾದೇವಿ ಜಾತ್ರಾ ಮಹೋತ್ಸವ ಗುರುವಾರ ಭಕ್ತಿ ಭಾವದೊಂದಿಗೆ ನಡೆಯಿತು.

ಜಾತ್ರೆ ನಿಮಿತ್ತ ನಸುಕಿನ ಜಾವ ಶ್ರೀದೇವಿ ಮಹಾಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ನಡೆದವು.

ನಂತರ ಸುಮಂಗಲೆಯರ ಕುಂಭ ಕಲಶ ಮತ್ತು ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.

ಬಾವನಮಠದ ಪುರಾತನ ಬಾವಿಯಲ್ಲಿ ಗಂಗಸ್ಥಳ ಕಾರ್ಯ ನಡೆಯಿತು. ನಂತರ ರಾಜವಾಡೆ, ಕತ್ರಿ ಬಜಾರ, ಬಾಲಾಜಿ ಮಂದಿರ ರಸ್ತೆ, ವಿಠ್ಠಲ ಮಂದಿರ ರಸ್ತೆ ಮೂಲಕ ದೇವಸ್ಥಾನ ತಲುಪಿತು. ವಿಶ್ವನಾಥಾಚಾರ್ಯರಿಂದ ವಿಶೇಷ ಪೂಜೆ ನೆರವೇರಿದವು.

ವಿಶ್ವಕರ್ಮ ಸಮಾಜದ ಅಧ್ಯ ಶ್ರೀನಿವಾಸ ಸೋನಾರ, ಪ್ರಭಾಕರ ಹಿಪ್ಪರಗಿ, ಸುನೀಲ ವರದಪ್ಪನವರ, ಮುತ್ತು ಸೋಮನಾಳ, ಮೌನೇಶ ಪತ್ತಾರ, ಗಂಗಪ್ಪ ಬಡಿಗೇರ, ಮುದಕಪ್ಪ ಬಡಿಗೇರ, ಚಿದಾನಂದ ಬಡಿಗೇರ, ರವಿ ಗಡಿಸೋಮನಾಳ, ದೇವೆಂದ್ರಪ್ಪ ಬಡಿಗೇರ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net