ವೀರಶೈವ ಲಿಂಗಾಯಿತ ಮಠಗಳ ಕೊಡುಗೆ ಅನನ್ಯ

The contribution of Veerashaiva Lingayat monasteries is unique.
ಬಸವನಬಾಗೇವಾಡಿ ತಾಲೂಕಿನ ಯರನಾಳದ ವಿರಕ್ತಮಠದ ಲಿಂ. ಪಂಪಾಪತಿ ಶಿವಯೋಗಿಗಳ ಜಾತ್ರೆ, ವಿಶ್ವ ದಾಸೋಹ ದಿನಾಚರಣೆಯಲ್ಲಿ ಶ್ರೀ ಡಾ. ಸಿದ್ಧಲಿಂಗ ಶ್ರೀ, ಸಂಗನಬಸವ ಸ್ವಾಮೀಜಿ, ಹಾರಿಕಾ ಮಂಜುನಾಥ, ಚಂದ್ರಶೇಖರಗೌಡ ಪಾಟೀಲ ಇತರರಿದ್ದರು.
Published on

ಬಸವನಬಾಗೇವಾಡಿ: ಅರ, ದಾಸೋಹ ನೀಡುತ್ತಿರುವ ವೀರಶೈವ ಲಿಂಗಾಯಿತ ಮಠಗಳ ಕೊಡುಗೆ ಅಪಾರವಾಗಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು.

ತಾಲೂಕಿನ ಯರನಾಳದಲ್ಲಿ ವಿರಕ್ತಮಠದ ಲಿಂ. ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಪುರಾಣಮಂಗಲ, ವಿಶ್ವ ದಾಸೋಹ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಡ ಕುಟುಂಬದ ಮಕ್ಕಳು ಶಿಣದಿಂದ ವಂಚಿತರಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಕೊಡುವ ಮೂಲಕ ಸರ್ಕಾರ ಮಾಡದಂತಹ ಕೆಲಸವನ್ನು ಮಠಗಳು ಮಾಡಿವೆ ಎಂದರು.

ಖ್ಯಾತ ವಾಗ್ಮಿ ಹಾರಿಕಾ ಮಂಜುನಾಥ ಮಾತನಾಡಿ, ಭಾರತೀಯ ಸಂಸತಿಯಲ್ಲಿ ದಾಸೋಹ ಪರಂಪರೆಯಿಂದ ಸರ್ವ ಧರ್ಮಿಯರಿಗೂ ಒಳಿತಾಗುತ್ತಿದೆ. ಮಠಗಳಲ್ಲಿನ ದಾಸೋಹ ಪ್ರಸಾದವನ್ನು ಸರ್ವ ಸಮುದಾಯದವರೂ ಸೇವಿಸಿ ಆನಂದಿಸುತ್ತಾರೆ. ದಾಸೋಹಕ್ಕೆ ಧನ, ಧಾನ್ಯ, ಕಾಣಿಕೆ ಹರಿದು ಬರುತ್ತದೆ. ಇಂತಹ ವಿಶೇಷತೆ ಇರುವುದು ಹಿಂದು ಧರ್ಮದಲ್ಲಿ ಮಾತ್ರ ಎಂದು ಹೇಳಿದರು.

ಇಂಗಳೇಶ್ವರದ ಡಾ. ಸಿದ್ಧಲಿಂಗ ಶ್ರೀಗಳು, ಆಲಮಟ್ಟಿಯ ರುದ್ರಮುನಿ ಶಿವಾಚಾರ್ಯರು, ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಸಿಸಿ ಬ್ಯಾಂಕ್​ ನಿರ್ದೇಶಕ ಚಂದ್ರಶೇಖರ್​ಗೌಡ ಪಾಟೀಲ, ಸೋಮನಗೌಡ ಪಾಟೀಲ, ಎ.ಎಂ. ಪಾಟೀಲ ಉಕ್ಕಲಿ, ಗಿರಿಜಾ ಪಾಟೀಲ, ಡಾ. ಅಮರೇಶ ಮಿಣಜಿಗಿ, ದಯಾನಂದ ಕಲ್ಲೂರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net