ಉಗ್ರರ ಕೃತ್ಯಕ್ಕೆ ಪ್ರತಿಕಾರ ತೀರಿಸಿಕೊಳ್ಳಲೇಬೇಕು

The acts of terrorists must be avenged.
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮೃತ ಹಿಂದುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಾಸುಗೌಡ
Published on

ಇಂಡಿ: ಪ್ರವಾಸಕ್ಕೆ ತೆರಳಿದ್ದ ಹಿಂದುಗಳನ್ನು ಉಗ್ರರು ಅಮಾನುಷವಾಗಿ ಹತ್ಯೆ ಮಾಡಿರುವುದು ಖಂಡನೀಯ ಇದಕ್ಕೆ ಕೇಂದ್ರ ಸರ್ಕಾರ ಪ್ರತಿಕಾರ ತೀರಿಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಆಗ್ರಹಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಮಂಡಲ ಅಧ್ಯ ಮಲ್ಲಿಕಾರ್ಜುನ ಕಿವುಡೆ, ಜಗದೀಶ ತ್ರಿ, ಅನೀಲಗೌಡ ಬಿರಾದಾರ ಮಾತನಾಡಿ, ಕಾಶ್ಮೀರದಲ್ಲಿ ಉಗ್ರರ ದಾಳಿ ಖಂಡನೀಯ ಇಂತಹ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದರು.

ಮುಖಂಡರಾದ ಹಣಮಂತಗೌಡ ಬಿರಾದಾರ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ದೇವೆಂದ್ರ ಕುಂಬಾರ, ಶೀಲವಂತ ಉಮರಾಣಿ, ನ್ಯಾಯವಾದಿ ಸೋಮು ನಿಂಬರಗಿಮಠ, ಅನೀಲಗೌಡ ಬಿರಾದಾರ, ರವಿ ವಗ್ಗೆ, ರವಿ ಬಗಲಿ, ಅಶೋಕಗೌಡ ಬಿರಾದಾರ, ಮಹೇಶ ಹೂಗಾರ, ಬಿ.ಎಸ್​.ಪಾಟೀಲ, ವಿಜಯಲಕ್ಷಿ$್ಮ ರೂಗಿಮಠ, ಶಾಮಲಾ ಬಗಲಿ, ರಾಮಸಿಂಗ್​ ಕನ್ನೊಳ್ಳಿ, ಶಾಂತು ಕಂಬಾರ, ಮಂಜು ದೇವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net