ವಸಂತ ಧಾರ್ಮಿಕ ಶಿಬಿರಕ್ಕೆ ಚಾಲನೆ

Spring religious camp kicks off
ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ರೈತ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಉಪನ್ಯಾಸ ರಮೇಶ ಚೀಮನಹಳ್ಳಿ ಮಾತನಾಡಿದರು.
Published on

ವಸಂತ ಧಾರ್ಮಿಕ ಶಿಬಿರಕ್ಕೆ ಚಾಲನೆ

ವಿಜಯಪುರ: ಅಖಿಲ ಭಾರತ ಮಧ್ವ ಮಹಮಂಡಲ ಹಾಗೂ ಶ್ರೀಕೃಷ್ಣ್ಣ ವಾದಿರಾಜ ಮಠದ ಸಯೋಗದಲ್ಲಿ ಹಮ್ಮಿಕೊಂಡಿರುವ ವಸಂತ ಧಾರ್ಮಿಕ ಶಿಣ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಕೃಷ್ಣ ವಾದಿರಾಜ ಮಠದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರ ಸಂಕಲ್ಪದಂತೆ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವುದು ಹಾಗೂ ಉತ್ತಮ ಸಂಸ್ಕಾರ ನೀಡುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪಂ. ಶ್ರೀನಿಧಿ ಆಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಅಶೋಕರಾವ, ಸದಸ್ಯ ವಿಕಾಸ ಪದಕಿ, ವ್ಯವಸ್ಥಾಪಕ ಪಂ.ವಾಸುದೇವಾಚಾರ್ಯ ಅಗ್ನಿಹೋತ್ರಿ, ಅರ್ಚಕ ಸಮೀರಾಚಾರ್ಯ ಪಾಟೀಲ ಉಪಸ್ಥಿತರಿದ್ದರು. ಅನಿತಾ ಪದಕಿ ತಂಡದವರು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net