ಸಮಾನತೆ ಸಂದೇಶ ಸಾರಿದ ಶರಣರು

Sharan who spread the message of equality
ದೇವರಹಿಪ್ಪರಗಿಯಲ್ಲಿ ಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ಕಲೆ, ಸಾಹಿತ್ಯ, ಸಾಂಸತಿಕ ವೇದಿಕೆ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ವಿತರಿಸಲಾಯಿತು. ಶಾಸಕ ರಾಜುಗೌಡ ಪಾಟೀಲ, ಮಡಿವಾಳೇಶ್ವರ ಸ್ವಾಮೀಜಿ, ಬಿ.ಎಂ.ಪಾಟೀಲ ಇತರರಿದ್ದರು.
Published on

ದೇವರಹಿಪ್ಪರಗಿ: ವೀರಶರಣ ಮಡಿವಾಳ ಮಾಚಿದೇವ ಸೇರಿ ಅಸಂಖ್ಯಾತ ಶರಣರು ಸಮಾನತೆ ಸಂದೇಶ ಸಾರಿದ್ದಾರೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಹೇಳಿದರು.

ಪಟ್ಟಣದ ಕಲ್ಮೇಶ್ವರ ದೇವಸ್ಥಾನ ಸಭಾಭವನದಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ಕಲೆ, ಸಾಹಿತ್ಯ, ಸಾಂಸತಿಕ ವೇದಿಕೆಯ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರು ಕಾಯಕದಲ್ಲಿಯೇ ಸತ್ಯ ಹಾಗೂ ಸ್ವರ್ಗ ಕಂಡುಕೊಂಡಿದ್ದಾರೆ. ವಚನಗಳ ಮೂಲಕ ಸಾರಿರುವ ಸಾಮಾಜಿಕ ನ್ಯಾಯವನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ, ಪಟ್ಟಣದಲ್ಲಿ ಪ್ರತಿಷ್ಠಾನದ ಮೂಲಕ ಪ್ರತಿವರ್ಷ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾನೀಯ ಎಂದರು.

ಶಿಕ ಅಶೋಕ ಹಂಚಲಿ ಮಾತನಾಡಿ, ನಮ್ಮ ಬದುಕು ಜನ ಮೆಚ್ಚುವಂತಿರಬೇಕು. ನಮ್ಮ ಉತ್ತಮ ಕಾರ್ಯಗಳ ಮೂಲಕ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.

ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಚಾಲಕ ಬಿ.ಎಂ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ಬಬಲೇಶ್ವರ ಪ್ರಾರ್ಥಿಸಿದರು. ಗಾಯಕ ಸಿದ್ದು ಮೇಲಿನಮನಿ ಹಾಗೂ ಅಮೂಲ್ಯ ವಚನಸುಧೆ ಹರಿಸಿದರು.

ಸಾಧಕರಾದ ಡಾ.ಆರ್​.ಆರ್​. ನಾಯಿಕ, ಅನೀಲಪ್ರಸಾದ ಏಳಗಿ, ಡಾ.ವಿ.ಬಿ. ದೇಸಾಯಿ, ನಾಗನಾಥಗೌಡ ಬಿರಾದಾರ, ಜಗದೀಶ ಸಾಲಳಿ, ಕಲ್ಲನಗೌಡ ಬಿರಾದಾರ, ಮಹಾಂತಯ್ಯ ತಂಬೂರಿಮಠ, ಬಸನಗೌಡ ಬಿರಾದಾರ ಅವರಿಗೆ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಟ್ಟಣ ಪಂಚಾಯಿತಿ ಉಪಾಧ್ಯ ರಮೇಶ ಮಸಬಿನಾಳ, ಡಿ.ಕೆ. ಪಾಟೀಲ, ಬಸಪ್ಪ ದೇವಣಗಾಂವ, ಸಂಗಪ್ಪ ತಡವಲ್​, ಬಿ.ಸಿ.ಹಿರೇಮಠ, ಆರ್​.ಆರ್​. ಮಣೂರ, ಶಾಂತಗೌಡ ಬಿರಾದಾರ, ನಾಗರಾಜ ಬಿರಾದಾರ, ಮಲ್ಲಪ್ಪ ಅಗಸರ, ರಮೇಶ ಹಡಪದ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net