ರಸ್ತೆ ಮೇಲೆ ಹರಿಯುತ್ತಿದೆ ಚರಂಡಿ ನೀರು

Sewage water flowing on the road
ನಾಲತವಾಡದ ದೇಶಮುಖರ ಓಣಿಯಲ್ಲಿ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿರುವುದು.
Published on

ನಾಲತವಾಡ: ಪಟ್ಟಣದ ಹೃದಯ ಭಾಗದಲ್ಲಿರುವ ದೇಶಮುಖರ ಓಣಿಯ ಸಮೀಪದಲ್ಲಿರುವ ಜಾಮೀಯಾ ಮಸೀದಿಯ ಮುಂಬಾಗದ ಬೀದಿ, ಕುವೆಂಪು ವೃತ್ತ್ತ ಸೇರಿದಂತೆ ಹಲವು ಕಡೆ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಪಟ್ಟಣದ ಜನತೆ ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಶಾಲೆ, ದೇವಸ್ಥಾನಕ್ಕೆ ತೆರಳುವವರು ಚರಂಡಿ ನೀರಿನಲ್ಲೇ ಹೋಗಬೇಕಾಗಿದೆ ಎಂದು ದೇಶಮುಖ ಓಣಿಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣ ಪಂಚಾಯಿತಿಯವರು ಚರಂಡಿ ಸ್ವಚ್ಛ ಗೊಳಿಸುತ್ತಿಲ್ಲ, ಹೀಗಾಗಿ ಚರಂಡಿ ತುಂಬಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಕಾಲಕಾಲಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕೆಂದು ಸಂಗಣ್ಣ ಅಗಸರ, ಮಲ್ಲು ಸಜ್ಜನ, ಪರಸಪ್ಪ ತತಬೀರಿ, ಎ.ಎಚ್​.ಖಾಜಿ, ಈಶ್ವರ ಕುಂಟೋಜಿ, ಪ್ರದಿಪ ಸಜ್ಜನ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net