

ಮುದ್ದೇಬಿಹಾಳ: ಹಿಂದಿನ ಕಾಲದಲ್ಲಿ ಶಿಣ ಕಡಿಮೆ ಸಂಸ್ಕಾರ ಹೆಚ್ಚು ಇತ್ತು. ಇಂದಿನ ಕಾಲದಲ್ಲಿ ಸಂಸ್ಕಾರ ಕಡಿಮೆ ಶಿಣ ಹೆಚ್ಚು ಎನ್ನುವ ಪರಿಸ್ಥಿತಿ ಬಂದಿದೆ. ಎಲ್ಲ ಕಷ್ಟಗಳನ್ನೆದುರಿಸಿ ಜ್ಞಾನ, ವಿದ್ಯೆ ಸಂಪಾದಿಸುವವರೇ ನಿಜವಾದ ಶ್ರೀಮಂತರು. ಇಂಥವರನ್ನು ಆಕ್ಸರ್ಡ್ ಮಠ್ಸ್ ಸಮೂಹ ಶಿಣ ಸಂಸ್ಥೆ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಶ್ಲಾನೀಯ ಎಂದು ಮುದ್ದೇಬಿಹಾಳ ಕಿಲ್ಲಾ ಹೊಸಮಠದ ಅಮರೇಶ್ವರ ದೇವರು ಹೇಳಿದರು.
ನಾಗರಬೆಟ್ಟ ಬಸ್ ನಿಲ್ದಾಣದ ಹತ್ತಿರ ಇರುವ ಆಕ್ಸರ್ಡ್ ಮಠ್ಸ್ ಸಮೂಹ ಶಿಣ ಸಂಸ್ಥೆಯ ಎಕ್ಸಪರ್ಟ್ ಸೈನ್ಸ್ ಪಿಯು ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಎಕ್ಸಪರ್ಟ್ ಟ್ಯಾಲೆಂಟ್ ಆವಾರ್ಡ್&2025 ಸ್ಪರ್ಧಾ ಪರೀೆ ವಿಜೇತರಿಗೆ ಬಹುಮಾನ ವಿತರಣೆ, ಎಂಬಿಬಿಎಸ್ಗೆ ಆಯ್ಕೆಯಾದ ಕಳೆದ ವರ್ಷದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧ್ಯತೆ ವಹಿಸಿದ್ದ ಸಂಸ್ಥೆಯ ಚೇರ್ಮನ್ ಬಿ.ಜಿ.ಮಠ (ಮುತ್ತು) ಮಾತನಾಡಿ, ಸ್ಪರ್ಧಾತ್ಮಕ ಪರೀೆ ಎದುರಿಸುವ ಶಕ್ತಿ, ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಬರಲಿ, ಅವರಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳಲಿ ಎನ್ನುವ ಉದ್ದೇಶದಿಂದ ಟ್ಯಾಲೆಂಟ್ ಆವಾರ್ಡ್ ಪರೀೆ ಪ್ರತಿ ವರ್ಷ ಏರ್ಪಡಿಸುತ್ತೇವೆ. ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ರ್ಯಾಂಕ್ ಪಡೆಯುತ್ತಾರೆ. ಎಂಬಿಬಿಎಸ್, ಬಿಎಎಂಎಸ್, ಇಂಜಿನೀಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸಗಳಿಗೆ ಆಯ್ಕೆಯಾಗುತ್ತಾರೆ. ಇದು ಹೆಮ್ಮೆ ಪಡುವಂಥದ್ದು ಎಂದರು.
ರಕ್ಕಸಗಿ ಕೆಪಿಎಸ್ ಶಾಲೆ ಶಿಕ ವಿ.ಎಸ್.ಮಳಗಿ, ಮುಖ್ಯಾಧ್ಯಾಪಕ ಎಸ್.ವಿ.ಶೆಟ್ಟರ್, ಹಳೇಯ ವಿದ್ಯಾರ್ಥಿ ದೇವರಾಜ ಪೂಜಾರಿ ಮಾತನಾಡಿದರು.
ದೇವಿ ಆರಾಧಕರಾದ ಬಸವಪ್ರಭು ಹಿರೇಮಠ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ಹಿರೇಮಠ, ಮುಖ್ಯಾಧ್ಯಾಪಕ ಬಸಯ್ಯ ಪರ್ವತಮಠ, ಹಿರೇಮುರಾಳದ ಕಲಾಂ ಬ್ಯಾಂಕ್ ಅಧ್ಯ ಅಕ್ಬರ್ ಮುಲ್ಲಾ,ಬ ಪ್ರಾಂಶುಪಾಲ ಇಾರ್ನ್ ಬಾಗವಾನ, ಮುಖ್ಯಾಧ್ಯಾಪಕರಾದ ಹೀರೂ ನಾಯಕ, ಶಿವಯ್ಯ ಹಿರೇಮಠ, ಶಿಕರಾದ ಹಣಮಂತ, ಪ್ರಮೋದ ಯರಗುಂಟಿ, ಮಲ್ಲಿಕಾರ್ಜುನ ಕಂಬಳಿ, ಮಹಾಂತೇಶ ಹೂಗಾರ ಉಪಸ್ಥಿತರಿದ್ದರು.ಅಶೋಕ ಗಡ್ಡಿ ಕಾರ್ಯಕ್ರಮ ನಿರ್ವಹಿಸಿದರು.
ಕಳೆದ ವರ್ಷದ ನೀಟ್ ಸಾಧಕರಾಗಿ ಎಂಬಿಬಿಎಸ್ ಸೀಟು ಪಡೆದುಕೊಂಡಿರುವ ಪ್ರಜ್ವಲ್ ಅಂಬಲಗಿ, ದೇವರಾಜ ಪೂಜಾರಿ, ಅಶೋಕ ಲೊಟಗೇರಿ, ದೇವರಾಜ ಪಾಟೀಲ ರಾಮ ಜೋಗಿ, ಸಂತೋಷ ಪೂಜಾರಿ, ಶಾಹೀನ್ ಬಾಗಲಕೋಟ, ಸೌಮ್ಯ ಭಂಡಾರಿಮಠ, ವಿದ್ಯಾ ಪರ್ವತಮಠ, ವಿವಿಧ ಶಾಲೆಗಳಿಂದ ಆಗಮಿಸಿದ್ದ ಮುಖ್ಯಾಧ್ಯಾಪಕರು, ಶಿಕರನ್ನು ಸನ್ಮಾನಿಸಲಾಯಿತು. ಕಾಳಗಿ ಗ್ರಾಪಂ ಮಾಜಿ ಅಧ್ಯ ಜಾವೀದ ಇನಾಮದಾರ ಇನ್ನಿತರರು ಮಠ ಅವರನ್ನು ಸನ್ಮಾನಿಸಿದರು.