

ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಏ.10ರಂದು ಬೆಳಗ್ಗೆ 10ಕ್ಕೆ ಬಿಜೆಪಿ ರೈತ ಮೋರ್ಚಾ ಅಧ್ಯ ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯ ಬಿ.ವೆ. ವಿಜಯೇಂದ್ರ ಅವರ ಭಾವಚಿತ್ರಗಳಿಗೆ ರಾಭಿಷೇಕ ಮೂಲಕ ಯಾವ ಸ್ಥಳದಲ್ಲಿ ಯತ್ನಾಳ ಉಚ್ಚಾಟನೆ ಕುರಿತ ಪ್ರತಿಭಟನೆಯಲ್ಲಿ ಅವಮಾನಿಸಲಾಗಿತ್ತೋ ಅದೇ ಸ್ಥಳದಲ್ಲಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದು ನಡಹಳ್ಳಿ ಅಭಿಮಾನಿ ಬಳಗದ ಮುಖಂಡರು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸರಕೋಡದ ರೈತ ಮುಖಂಡ ಗುರುನಾಥಗೌಡ ಬಿರಾದಾರ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ರಡ್ಡಿ ಯುವ ಸಮಾಜದ ಮುಖಂಡ ಸೋಮನಗೌಡ ಮೇಟಿ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಗೆ ಪ್ರತಿಭಟಿಸುವ ನೆಪದಲ್ಲಿ ನಡೆದುಕೊಂಡ ರೀತಿ, ಆಡಿದ ಮಾತುಗಳು ಮತ್ತು ಕೀಳುಮಟ್ಟದ ಜಾತಿ ರಾಜಕಾರಣವನ್ನು ಖಂಡಿಸುವುದಾಗಿ ತಿಳಿಸಿದರು.
ಗುರುನಾಥಗೌಡ ಮಾತನಾಡಿ, ನಡಹಳ್ಳಿಯವರು ಯತ್ನಾಳರ ಬಗ್ಗೆ ಅಗೌರವದಿಂದ ಮಾತನಾಡಿಲ್ಲ. ಪದ ತೀರ್ಮಾನ ಸ್ವಾಗತಿಸಿದ್ದಾರೆ. ಯತ್ನಾಳ ಪರ ಹೋರಾಟಕ್ಕೆ ವಿರೋಧವಿಲ್ಲ. ಆದರೆ ವ್ಯಕ್ತಿಗತ ಹೋರಾಟ, ನಡಹಳ್ಳಿಯವರೊಂದಿಗೆ ಮಾಜಿ ಸಿಎಂ ಯಡಿಯೂರಪ್ಪ, ಪದ ರಾಜ್ಯಾಧ್ಯ ವಿಜಯೇಂದ್ರ ಭಾವಚಿತ್ರಗಳಿಗೆ ಅವಮಾನಿಸಿರುವುದು ಬೇಸರದ ಸಂಗತಿ ಎಂದರು.
ಬಿ.ಆರ್. ಪಾಟೀಲ ಮಡಿಕೇಶ್ವರ ಮಾತನಾಡಿ, ಯತ್ನಾಳರನ್ನು ಉಚ್ಚಾಟಿಸಿದ್ದು ಪವನ್ನು ಕೆಳಹಂತದಿಂದ ಕಟ್ಟಿರುವ ನಮ್ಮಂಥ ಕಾರ್ಯಕರ್ತರಿಗೆ ನೋವು ನೀಡಿದೆ. ಯಡಿಯೂರಪ್ಪ, ಈಶ್ವರಪ್ಪ, ಅನಂತಕುಮಾರ ಅವರು ಚುರಮುರಿ ತಿಂದು, ಸೈಕಲ್ ತುಳಿದು ಇಲ್ಲೆಲ್ಲ ಓಡಾಡಿ ಪ ಕಟ್ಟಿದ್ದಾರೆ. ಯತ್ನಾಳರು ಪದಿಂದ ಹೊರಗೆ ಹೋಗೋದು ಒಳಗೆ ಬರೋದು ಹೊಸ ವಿಷಯವೇನಲ್ಲ. ಇನ್ನಾದರೂ ಯತ್ನಾಳರು ಸುಧಾರಿಸಬೇಕು. ಯತ್ನಾಳರ ಹೆಸರಲ್ಲಿ ಗೊಂದಲ ಹುಟ್ಟಿಸುವುದು ಬೇಡ. ಕಾಂಗ್ರೆಸ್ಸಿನನವರು ಈ ಅವಕಾಶ ಬಳಸಿಕೊಳ್ಳುತ್ತಿದ್ದಾರೆ ಎಂದರು.
ರಡ್ಡಿ ಯುವ ಬಳಗದ ಮುಖಂಡ ಸೋಮಶೇಖರ ಮೇಟಿ ಮಾತನಾಡಿ, ನಮ್ಮದೇ ಸಮಾಜದ ವ್ಯಕ್ತಿಯೊಬ್ಬರಿಗೆ ನಮ್ಮದೇ ಸಮಾಜದ ಇನ್ನೊಬ್ಬರು ಅವಮಾನ ಮಾಡುವುದು ಅವರ ಮನಸ್ಥಿತಿ ತೋರಿಸುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಮಾತನಾಡಿ, ಲಿಂಗಾಯತರಲ್ಲಿ ಎಲ್ಲ ಉಪಪಂಗಡ ಒಂದೇ ಆಗಿದೆ ಅನ್ನೋ ನೀವೇ ಅದನ್ನು ಒಡೆಯುತ್ತಿದ್ದೀರಿ. ಮುಗ್ಧ ಯುವಕರ ದಾರಿ ತಪ್ಪಿಸುತ್ತಿದ್ದೀರಿ. ಇದು ನಿಮಗೆ ಶೋಭೆ ತರುವಂಥದ್ದಲ್ಲ ಎಂದರು.
ಮುಖಂಡರಾದ ಕಾಶಿನಾಥಗೌಡ ಕೊಣ್ಣೂರ, ಜಿ.ಬಿ. ಬಿರಾದಾರ ಮಡಿಕೇಶ್ವರ, ಎಂ.ಆರ್. ಪಾಟೀಲ ವಕೀಲರು, ಎಂ.ಎಸ್. ಬಿರಾದಾರ ವಕೀಲರು, ಮಲ್ಲಯ್ಯಮುತ್ಯಾ ಬಿರಾದಾರ ಚೊಂಡಿ, ಮಡಿವಾಳಪ್ಪಗೌಡ ಮುದ್ನೂರ, ಗಿರೀಶಗೌಡ ಪಾಟೀಲ ಹಿರೇಮುರಾಳ, ಶ್ರೀಕಾಂತ ಹಿರೇಮಠ, ಗೌರಮ್ಮ ಹುನಗುಂದ, ರೇಖಾ ಕೊಂಡಗೂಳಿ, ಅಪ್ಪು ಧನ್ನೂರ, ಹಣಮಂತ್ರಾಯ ದೇವರಳ್ಳಿ, ಸೋಮನಗೌಡ ಪಾಟೀಲ ನಡಹಳ್ಳಿ ಇದ್ದರು.