ಯತ್ನಾಳ ಉಚ್ಚಾಟನೆ ಖಂಡಿಸಿ 8ರಂದು ಪ್ರತಿಭಟನೆ

Protest on the 8th to condemn Yathna's expulsion
ಇಂಡಿ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಮಡಿದ್ದ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ದಯಾಸಾಗರ ಪಾಟೀಲ ಮಾತನಾಡಿದರು. ಗಿರಮಲ್ಲಗೌಡ ಬಿರಾದಾರ, ಬಾಬು ಹಂಜಗಿ, ಶಿವಾನಂದ ಬಿರಾದಾರ ಇದ್ದರು.
Published on

ಇಂಡಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಪದಿಂದ ಉಚ್ಚಾಟಿಸಿದ್ದನ್ನು ಖಂಡಿಸಿ, ತಾಲೂಕಿನ ಬಸವದಳ, ಹಿಂದು ಪರ ಸಂಟನೆಗಳು, ಯತ್ನಾಳರ ಅಭಿಮಾನಿ ಬಳಗದವರು ಏ. 8 ರಂದು ಬೆಳಗ್ಗೆ 10ಕ್ಕೆ ಪಟ್ಟಣದಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದರು.

ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಯತ್ನಾಳ ಅಭಿಮಾನಿ ಬಗಳ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧರ ಕೈಗೊಳ್ಳಲಾಯಿತು.

ಸಭೆಯ ನೇತೃತ್ವ ವಹಿಸಿದ್ದ ಜಿಲ್ಲಾ ಬಿಜೆಪಿ ಉಪಾಧ್ಯ ದಯಾಸಾಗರ ಪಾಟೀಲ ಮಾತನಾಡಿ, ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಿಂದ ಪ್ರತಿಭಟನೆ ಹೊರಟು ಮಹಾವೀರ ಸರ್ಕಲ್​, ಬಿ.ಆರ್​.ಅಂಬೇಡ್ಕರ್​ ವೃತ್ತ್ತದ ಮೂಲಕ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ವಿವಿಧ ಹಿಂದುಪರ ಸಂಟನೆಗಳ ಪದಾಕಾರಿಗಳು, ಬಸನಗೌಡರ ಅಭಿಮಾನಿ ಬಳಗ, ಗ್ರಾಮಗಳ ವಿವಿಧ ಜಾತಿಗಳ ಮುಖಂಡರು ಅಲ್ಲದೇ ಸನಾತನ ಧರ್ಮದ ಪ್ರಮುಖರು, ಯುವಕರು ಭಾಗವಹಿಸಲಿದ್ದಾರೆ ಎಂದರು.

ಸುಮಾರು 10 ಸಾವಿರ ಜನ ಸೇರುವ ನಿರೀೆಯಿದ್ದು, ಎಲ್ಲರಿಗೂ ಕೇಸರಿ ಟೋಪಿ, ವಸ್ತ್ರ ವಿತರಣೆ ಮಾಡಲಾಗುವದು. ವಿವಿಧ ಗ್ರಾಮಗಳಿಂದ ಡೊಳ್ಳು, ಭಾಜಿ ಭಜಂತ್ರಿ, ಚಿಟ್ಟಹಲಗೆ ಮೇಳ, ಕೊಂಬು ಬಳಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು.

ಪ್ರಮುಖರಾದ ಗಿರಮಲ್ಲಗೌಡ ಬಿರಾದಾರ, ಬಾಬು ಹಂಜಗಿ, ಶಿವಾನಂದ ಬಿರಾದಾರ, ಶಿವಲಿಂಗಪ್ಪ ಹೊಸಮನಿ, ಸೋಮನಾಥ ಶಿವೂರ, ಸಿದ್ದು ಬಡಿಗೇರ, ಶಿವಾನಂದ ಚಾಳಿಕಾರ, ಶ್ರೀಶೈಲ ಕಲ್ಲೂರ ಮಾತನಾಡಿದರು.

ಶ್ರೀಧರ ತ್ರಿ, ಸಿದ್ದು ಕಪ್ಪೇಣ್ಣವರ, ಪ್ರಕಾಶ ಬಿರಾದಾರ, ರವಿಗೌಡ ಪಾಟೀಲ ಪ್ರತಿಭಟನೆಗೆ ಅಗತ್ಯವಿರುವ ಧ್ವಜ, ಕುಡಿಯುವ ನೀರು, ಬ್ಯಾನರ್​ ಒದಗಿಸಿಕೊಡುವುದಾಗಿ ತಿಳಿಸಿದರು. ಪಂಚಮಸಾಲಿ ಸಮಾಜದ ಅಧ್ಯ ವಿ.ಎಚ್​.ಬಿರಾದಾರ ಅಧ್ಯತೆ ವಹಿಸಿದ್ದರು.

ಸುನೀಲಗೌಡ ಬಿರಾದಾರ, ಅಯ ಪಾಟೀಲ, ಎಸ್​.ಎಸ್​.ರೂಗಿಮಠ, ಅನೋಲ ಪಾಟೀಲ, ನಾಗರಾಜ ಧಶವಂತ, ರವಿ ಚವ್ಹಾಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net