ಯತ್ನಾಳ ಉಚ್ಚಾಟನೆ ವಿರೋಧಿಸಿ ಪ್ರತಿಭಟನೆ

Protest against Yathna's expulsion
ಹೂವಿನಹಿಪ್ಪರಗಿಯಲ್ಲಿ ಶಾಸಕ ಬಸವನಗೌಡ ಪಾಟೀಲ ಯತ್ನಾಳರನ್ನು ಉಚ್ಚಾಟಿಸಿದ ಕ್ರಮ ವಿರೋಧಿಸಿ ಹಿಂದುಪರ ಸಂಟನೆಗಳು, ಯತ್ನಾಳರ ಅಭಿಮಾನಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಪ್ರಭುಗೌಡ ದೇಸಾಯಿ, ಡಾ. ಬಿ.ಎಸ್​. ಪಾಟೀಲ, ಎಂ.ಎಸ್​. ರುದ್ರಗೌಡರ ಇತರರಿದ್ದರು.
Published on

ಹೂವಿನಹಿಪ್ಪರಗಿ : ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕ್ರಮ ವಿರೋಧಿಸಿ ಹಿಂದುಪರ ಸಂಟನೆಗಳು, ಯತ್ನಾಳ ಅಭಿಮಾನಿಗಳು ಸೋಮವಾರ ಪಟ್ಟಣದಲ್ಲ್ಲಿ ಪ್ರತಿಭಟಿಸಿದರು.

ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಮೆರವಣಿಗೆ ಪರಮಾನಂದ ವೃತ್ತದಲ್ಲಿ ಪ್ರತಿಭಟನಾಕಾರರು ಕೆಲ ಹೊತ್ತು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಕಾರರನ್ನು ಉದ್ದೇಶಿಸಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯ ಪ್ರಭುಗೌಡ ದೇಸಾಯಿ ಮಾತನಾಡಿ, ಹಿಂದು ಪರ ಮಾತನಾಡಿದ ಶಾಸಕ ಬಸವನಗೌಡ ಪಾಟೀಲ ಯತ್ನಾಳರನ್ನು ಪದಿಂದ ಉಚ್ಚಾಟಿಸಿದ್ದು ಸರಿಯಲ್ಲ. ಬಿಜೆಪಿ ನಾಯಕರು ಹಿಂದುಗಳಿಗೆ ಅವಮಾನ ಮಾಡಿದಂತಾಗಿದೆ ಎಂದರು.

ಉಚ್ಚಾಟನೆ ಆದೇಶ ರದ್ದುಪಡಿಸದಿದ್ದರೆ ರಾಜ್ಯದಲ್ಲಿ ಹೋರಾಟ ಚುರುಕುಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಮುಖಂಡರಾದ ಡಾ. ಬಿ.ಎಸ್​. ಪಾಟೀಲ (ನಾಗರಾಳ ಹುಲಿ) ಎಂ.ಎಸ್​. ರುದ್ರಗೌಡರ, ಶ್ರೀಕಾಂತ ಕೊಟ್ರಶಟ್ಟಿ, ನಂದು ಗಡಗಿ, ಉಮೇಶ ಬಶಟ್ಟಿ ಮಾತನಾಡಿದರು.

ಚಂದು ಗುಂಡಾನವರ, ಶಿವಾನಂದ ಗುಂಡಾನವರ, ಶ್ರೀಶೈಲ ಕನಮಡಿ, ಆನಂದ ಲಮಾಣಿ, ಪ್ರಕಾಶ ಗುಂಡಾನವರ, ಚಂದ್ರಶೇಖರ ನಾಡಗೌಡ, ಮಲ್ಲು ಗುಂಡಾನವರ, ಅಶೋಕ ಶಿವಯೋಗಿ, ಸಿದ್ದನಗೌಡ ಬಿರಾದಾರ, ಆನಂದಗೌಡ ಪಾಟೀಲ, ಬಾಬು ಆಲೂರ, ನಾಗೇಶ ಹಾದಿಮನಿ, ಸಂತೋಷ ತೋಟದ, ಬಸವರಾಜ ಹೆರೋರ, ಮಹಾಂತೇಶ ನಾಡಗೌಡ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net