ಆಕ್ಸರ್ಡ್​ ಪಾಟೀಲ್​ ಸಂಸ್ಥೆ ಕಾರ್ಯ ಶ್ಲಾನೀಯ

Oxford Patil Institute of Technology
ಮುದ್ದೇಬಿಹಾಳ: ನಾಗರಬೆಟ್ಟದ ಗುಡ್ಡದ ಹತ್ತಿರ ಇರುವ ಆಕ್ಸರ್ಡ್​ ಪಾಟೀಲ್ಸ್​ ಸಮೂಹ ಶಿಣ ಸಂಸ್ಥೆಯಲ್ಲಿ ಶನಿವಾರ ನಡೆದ ಪ್ರಶಸ್ತಿ ಪ್ರದಾನ, ಸನ್ಮಾನ ಸಮಾರಂಭವನ್ನು ಅಪರ ಜಿಲ್ಲಾ-ಕಾರಿ ಸೋಮಲಿಂಗ ಗೆಣ್ಣೂರ ಉದ್ಘಾಟಿಸಿದರು. ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ, ಹರೀಶ ನಾಯಕ, ಡಾ.ಸುಮಲತಾ ನಾಯಕ, ಡಾ.ಪರಶುರಾಮ ವಡ್ಡರ, ಡಾ.ನಿಖಿತಾ ಎನ್​.ಕೆ. ಇನ್ನಿತರಿದ್ದರು.
Published on

ಮುದ್ದೇಬಿಹಾಳ: ವಿದ್ಯೆಗೆ ವಿನಯವೇ ಭೂಷಣ ಎನ್ನುವಂತೆ ವಿದ್ಯೆ ಜತೆ ಸಂಸ್ಕಾರವೂ ಇಂದಿನ ಅಗತ್ಯವಾಗಿದೆ. ಇವೆರಡನ್ನೂ ನೀಡುತ್ತಿರುವ ಆಕ್ಸರ್ಡ್​ ಪಾಟೀಲ್​ ಸಂಸ್ಥೆ ಉತ್ತರ ಕರ್ನಾಟಕದ ಹೆಮ್ಮೆ ಎನಿಸಿಕೊಂಡಿದೆ. ವಿದೇಶದಲ್ಲಿ ಮಕ್ಕಳು ವಯಸ್ಕರಾದ ಮೇಲೆ ಸ್ವತಂತ್ರರಾಗ್ತಾರೆ. ಅದರೆ ಭಾರತದಲ್ಲಿ ತಂದೆ ತಾಯಿ ಜತೆ ಕೊನೇವರೆಗೂ ಇರ್ತಾರೆ. ಇದುವೆ ಭಾರತದ ಸಂಸತಿಯ ಸೌಂದರ್ಯ ಎಂದು ಅಂತರಾಷ್ಟ್ರೀಯ ಖ್ಯಾತಿಯ ಹಿರಿಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಹೇಳಿದರು.

ನಾಗರಬೆಟ್ಟ ಗುಡ್ಡದ ಹತ್ತಿರ ಇರುವ ಆಕ್ಸಪರ್ಡ್​ ಪಾಟೀಲ್ಸ್​ ಸಮೂಹ ಶಿಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೀನಿಯಸ್​ ಪ್ರಶಸ್ತಿ ಪ್ರದಾನ, ಎಂಬಿಬಿಎಸ್​ಗೆ ಆಯ್ಕೆಯಾದ ಹಳೇಯ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಗುರಿ, ಛಲ ಇರಬೇಕು. ಪಾಲಕರು, ದೇಶ ಹೆಮ್ಮೆ ಪಡುವಂತಾಗಬೇಕು. ಹಣ ಗಳಿಸುವುದೇ ಎಲ್ಲವೂ ಅಲ್ಲ. ವೈದ್ಯಕಿಯ ಶಿಣದ ಜತೆಗೆ ಕೃಷಿ ವಿಜ್ಞಾನ ಶಿಣವೂ ಸಿಗುವಂತಾಗಬೇಕು. ಮಾಡುವ ಕೆಲಸದಲ್ಲಿ ಪ್ರೀತಿ, ಗೌರವ ಇರಬೇಕು. ವಿದೇಶಗಳಿಗೆ ಹೋಲಿಸಿದರೆ ಭಾರತವೇ ಶ್ರೇಷ್ಠವಾದದ್ದು. ಕೆಲಸ ಹುಡುಕುವವರಾಗಬೇಡಿ, ಸೃಷ್ಟಿಸುವವರಾಗಿ. ಎಐ ಯುಗಕ್ಕೆ ಕಾಲಿಟ್ಟಿರುವ ನಾವು ಅದನ್ನು ಎದುರಿಸಲು ಸಜ್ಜಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿರಿ ಸೋಮಲಿಂಗ ಗೆಣ್ಣೂರ, ಶೈಣಿಕ ಸಂಸ್ಥೆಗಳು ವಿದ್ಯೆ ಮಾರುವಂತಾಗಬಾರದು, ನೀಡುವಂತಾಗಬೇಕು. ಬಡಕುಟುಂಬಗಳಿಗೆ ಸರ್ಕಾರದ ಯೋಜನೆ ತಲುಪಿಸಬೇಕಾದರೆ ಅಧಿಕಾರಿಗಳಾಗಬೇಕು. ಮಕ್ಕಳು ದಡ್ಡರಲ್ಲ ಎನ್ನುವ ಹೆಮ್ಮೆ ಪಾಲಕರಿಗೆ ಇರುತ್ತದೆ. ಆ ಹೆಮ್ಮೆಯನ್ನು ಮಕ್ಕಳು ಉಳಿಸಬೇಕು. ತಂದೆ ತಾಯಿ ಶಿಕರು ನಿಜವಾದ ಹೀರೋಗಳು ಇವರನ್ನು ಆದರ್ಶರಾಗಿಟ್ಟುಕೊಳ್ಳಬೇಕು ಎಂದರು

ಸರ್ಕಾರಿ ವಸತಿಯುಕ್ತ ಪದವಿ ಕಾಲೇಜು ಪ್ರಾಂಶುಪಾಲ ಡಾ.ಶರಣು ಪಾಟೀಲ ಮಾತನಾಡಿ, 7000 ವೈದ್ಯಕಿಯ ಕಾಲೇಜುಗಳಲ್ಲಿ ಅಂದಾಜು 1.75 ಲ ಮೆಡಿಕಲ್​ ಸೀಟುಗಳಿದ್ದರೆ ಆಕಾಂಗಳ ಸಂಖ್ಯೆ 50 ಪಟ್ಟು ಹೆಚ್ಚಾಗಿದೆ. ಎಲ್ಲರಿಗೂ ವೈದ್ಯಕಿಯ ಶಿಣ ಸಿಗುವುದಿಲ್ಲ. ಪರ್ಯಾಯ ದಾರಿ ಹುಡುಕಬೇಕು ಎಂದರು.

ಬಿಇಒಬಿ.ಎಸ್​.ಸಾವಳಗಿ, ಸಂಗಮೇಶ ಹೂಗಾರ, ಡಾ.ಡಿ.ಆರ್​.ಮಳಖೇಡ, ಡಾ.ನಿಖಿತಾ ಎನ್​.ಕೆ., ಡಾ.ಪರಶುರಾಮ ವಡ್ಡರ, ಹಳೇಯ ವಿದ್ಯಾರ್ಥಿ ಮೊಹಮ್ಮದಸಲೀಮ ಮಾತನಾಡಿದರು.

ಸಂಸ್ಥೆಯ ಆಡಳಿತಾದಿಕಾರಿ ಅಮಿತಗೌಡ ಪಾಟೀಲ ಅಧ್ಯತೆ ವಹಿಸಿದ್ದರು. ನಿರ್ದೇಶಕ ದರ್ಶನಗೌಡ ಪಾಟೀಲ, ಹರೀಶ ನಾಯಕ, ಡಾ.ಸುಮಲತಾ ನಾಯಕ ಉಪಸ್ಥಿತರಿದ್ದರು.ನೀಟನಲ್ಲಿ ಹೆಚ್ಚು ಅಂಕ ಗಳಿಸಿ ಹೆಸರಾಂತ ಮೆಡಿಕಲ್​ ಕಾಲೇಜುಗಳಲ್ಲಿ ಎಂಬಿಬಿಎಸ್ಗೆ ಆಯ್ಕೆಯಾದ 12 ವಿದ್ಯಾರ್ಥಿಗಳಿಗೆ ತಲಾ 20,000 ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಎಂಬಿಬಿಎಸಗೆ ಆಯ್ಕೆಯಾದ ಕಳೆದ ವರ್ಷದ 172 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿನಿ ಸೃಷ್ಟಿ ಪ್ರಾರ್ಥಿಸಿದರು. ಪ್ರಾಂಶುಪಾಲ ರೇವಣಸಿದ್ದ ಚಲವಾದಿ ಮುರಾಳ ಸ್ವಾಗತಿಸಿದರು. ಪರಶುರಾಮ ಹೂಗಾರ ವಂದಿಸಿದರು.ಮುಖ್ಯಾದ್ಯಾಪಕ ಇಸ್ಮಾಯಿಲ್​ ಮನಿಯಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net