ಅವಸಾನದತ್ತ ಗ್ರಾಪಂ ಹಳೆಯ ಕಟ್ಟಡ

Old Gram Panchayat building near Avasanadatta
ಅವಸಾನದ ಅಂಚಿನಲ್ಲಿರುವ ಗೊಳಸಂಗಿ ಗ್ರಾಮ ಪಂಚಾಯಿತಿಯ ಕಟ್ಟಡ.
Published on

ಗ್ರಾಮೀಣ:  ಜನರ ಜೀವನಾಡಿ, ಸರ್ಕಾರದ ಕೊಂಡಿಯಾಗಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಾವಸ್ಥೆಯ ಕಾಲಟ್ಟ ತಲುಪಿದು,್ದ ನೂತನ ಕಟ್ಟಡ ಕಾಮಗಾರಿಗೆ ನಿವೇಶನ ಮತ್ತು ಅನುದಾನ ಲಭ್ಯವಿದ್ದರೂ ಸಂಬಂಧಪಟ್ಟವರ ರ್ನಿಲಕ್ಷದಿಂದ ಹೊಸ ಕಟ್ಟಡದ ಕಾಮಗಾರಿಗೆ ಮುಹೂರ್ತ ಕೂಡಿ ಬರುತ್ತಿಲ್ಲ.

ಗ್ರಾ.ಪಂ.ಕಚೇರಿ ಕಟ್ಟಡವು 50 ವರ್ಷಕ್ಕಿಂತ ಹಳೆಯದ್ದಾಗಿದೆ.

ಒಂದೆ ಕೋಣೆಯಲ್ಲಿ ಸದಸ್ಯರ ಸಭಾಭವನ, ಲೆಕ್ಕ ಸಹಾಯಕರ ಕೌಂಟರ್​, ಒಂದು ಕೋಣೆಯಲ್ಲಿ ಅಧ್ಯರು, ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಯವರ ಆಸನಗಳಿವೆ.

ಇಂಥ ದುಸ್ಥಿತಿಯಲ್ಲಿರುವ ಕಟ್ಟಡಕ್ಕೆ ಅಂತ್ಯ ಹಾಡಿ, ನೂತನ ಕಟ್ಟಡ ನಿರ್ಮಿಸಬೇಕೆಂಬುದು ಆಡಳಿತ ಮಂಡಳಿಯ ಕನಸಾಗಿದೆ. ಈಗಿದ್ದ ಹಳೆಯ ಕಟ್ಟಡದ ಆಸುಪಾಸಿನಲ್ಲಿಯೇ ನೂತನ ಕಟ್ಟಡ ನಿರ್ಮಿಸಬೇಕೆಂಬುದು ಬಹುತೇಕ ಸದಸ್ಯರ ಅಭಿಪ್ರಾಯವಾಗಿದೆ. ಎರಡು ವರ್ಷದ ಹಿಂದೆಯೇ ಕೂಡಗಿ ಎನ್​ಟಿಪಿಸಿ ನೀಡಿದ್ದ ತೆರಿಗೆ ಹಣದಲ್ಲಿ 30 ಲ ರೂ., ಮೀಸಲಿಡಲಾಗಿದೆ.

ಆದರೆ, ಹಳೆಯ ಕಟ್ಟಡದ ಅಕ್ಕಪಕ್ಕದಲ್ಲೆಲ್ಲೂ ನಿರೀತ ಮಟ್ಟದಲ್ಲಿ ಜಾಗ ಸಿಗುತ್ತಿಲ್ಲ. ಎರಡು ವರ್ಷದ ಹಿಂದೆಯೇ ಗ್ರಾಪಂ ಪಕ್ಕದಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ಆವರಣದಲ್ಲಿ ನೂತನ ಗ್ರಾಪಂ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಶಿಣ ಇಲಾಖೆಯವರ ತಗಾದೆಯಿಂದಾಗಿ ಆ ಕನಸು ಭಗ್ನಗೊಂಡಿದೆ ಎನ್ನಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ&50 ಕ್ಕೆ ಹೊಂದಿಕೊಂಡಿರುವ ಮಾದರಿ ಬಡಾವಣೆಯಲ್ಲಿ ಸಾಕಷ್ಟು ಖಾಲಿ ನಿವೇಶನ ಲಭ್ಯವಿದೆ.ವಿಶಾಲವಾದ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಿದರೆ ನಿರೀತ ಪ್ರಮಾಣದಲ್ಲಿ ಸಭಾಭವನ, ಅಧ್ಯರ ಕೊಠಡಿ, ಪಿಡಿಒ ಕೊಠಡಿ, ಲೆಕ್ಕ ಸಹಾಯಕರು, ಕಂಪ್ಯೂಟರ್​ ಆರೇಟರ್​ ಕೊಠಡಿ, ವಿಶ್ರಾಂತಿ ಕೋಣೆ, ಉದ್ಯಾನವನ, ಪಾರ್ಕಿಂಗ್​ ನಿರ್ಮಿಸಬಹುದಾಗಿದೆ. ಆದರೆ ಅದು ಊರಿಂದ ದೂರವಾಗುತ್ತದೆ ಎಂದು ಸಂಬಂಧಿತರು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net