

ಇಂಡಿ : ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪದಿಂದ ಉಚ್ಚಾಟಿಸಿರುವ ಕ್ರಮ ವಿರೋಧಿಸಿ ವಿವಿಧ ಹಿಂದುಪರ ಸಂಟನೆಗಳ ಕಾರ್ಯಕರ್ತರು ಹಾಗೂ ಯತ್ನಾಳರ ಅಭಿಮಾನಿಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಅಭಿಮಾನಿಗಳು ಹಲಿಗೆ ಬಾರಿಸುತ್ತ ಬಿಜೆಪಿ ರಾಜ್ಯಾಧ್ಯ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುಧ್ಧ ಧಿಕ್ಕಾರ ಕೂಗುತ್ತ, ಯತ್ನಾಳರಿಗೆ ಜಯವಾಗಲಿ ಎಂದು ಜಯೂಷ ಕೂಗಿದರು.
ಬಸನಗೌಡ ಪಾಟೀಲ (ನಾಗರಾಳ ಹುಲಿ) ಮಾತನಾಡಿ, ಯಡಿಯೂರಪ್ಪ ವಿಜಯೇಂದ್ರ ಅವರ ಕುಮ್ಮಕ್ಕಿನಿಂದ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಅವರನ್ನು ಪಕ್ಕೆ ಮರಳಿ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಎಂ.ಎಸ್.ರುದ್ರಗೌಡ ಮಾತನಾಡಿ, ಬಿಜೆಪಿ ಹಿರಿಯ ನಾಯಕರು ನಿರ್ಧಾರವನ್ನು ಬದಲಿಸಬೇಕು ಎಂದರು. ದಯಾಸಾಗರ ಪಾಟೀಲ ಮಾತನಾಡಿ, ಹಿಂದುಪರವಾಗಿ ಗಟ್ಟಿಯಾಗಿ ನಿಲ್ಲುವ ಯತ್ನಾಳರನ್ನು ಉಚ್ಚಾಟಿಸಿದ್ದು ಸರಿಯಲ್ಲ ಎಂದರು. ತಾಲೂಕು ಪಂಚಮಸಾಲಿ ಸಮಾಜದ ಅಧ್ಯ ವಿ.ಎಚ್. ಬಿರಾದಾರ ಮಾತನಾಡಿದರು.
ವಿಜಯೇಂದ್ರ ಹಾಗೂ ಯಡಿಯೂರಪ್ಪನವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.
ಶ್ರೀಶೈಲ ಮುಳಜಿ, ಶರಣಗೌಡ ಬಂಡಿ, ಗಿರಿಮಲ್ಲಗೌಡ ಬಿರಾದಾರ, ರಮೇಶ ಬಿರಾದಾರ, ಅಣ್ಣಪ್ಪ ಬಡಿಗೇರ, ಸೋಮಶೇಖರ ದೇವರ, ಸೋಮನಾಥ ಪ್ರಚಂಡಿ, ಶ್ರೀಶೈಲ ಕಲ್ಲೂರ, ವಿಠ್ಠಲ ಬಾಬಳಗಾಂವ, ಅಶೋಕಗೌಡ ಪಾಟೀಲ, ಪಂಚಪ್ಪ ಪಾಟೀಲ, ವಿನೋದ ಹದಗಲ್ಲ, ಆನಂದ ದೇವರ, ಶಾಂತೇಶ ತ್ರಿ, ರತನ ಹಲವಾಯಿ, ಅಯ ಪಾಟೀಲ ಪಾಲ್ಗೊಂಡಿದ್ದರು.