

ಹೋರ್ತಿ: ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲೂಕಿನ ಬೆಂಡೋಣಿ ಗ್ರಾಮದ ಮಂಜುಳಾ ನಗಿಮುಖ ಅವರು ಭ್ರಷ್ಟಾಚಾರ ನಿಮೂರ್ಲನೆಯಾಗಬೇಕು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಡೆಗಟ್ಟಬೇಕು ಎಂದು ಆಗ್ರಹಿಸಿ ತಮ್ಮ ಗ್ರಾಮದಿಂದ ದೆಹಲಿಗೆ ಪಾದಯಾತ್ರೆ ಕೈಗೊಂಡು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.
29 ವರ್ಷ ವಯಸ್ಸಿನ ಮಂಜುಳಾ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವರು. ಮಹಿಳೆಯರ ಮೇಲಿನ ದೌರ್ಜನ್ಯ, ಭ್ರಷ್ಟಾಚಾರ ತಾಂಡವ ಮುಂತಾದವುಗಳ ನಿಮೂರ್ಲನೆಯಾಗ ಬೇಕೆಂಬುದು ಅವರ ಆಶಯವಾಗಿದೆ. ಪಾದಯಾತ್ರೆಯಲ್ಲಿ ಗ್ರಾಮಸ್ಥರು ಅವರಿಗೆ ತಂಗುವ ವ್ಯವಸ್ಥೆ ಮಾಡಿ ಸನ್ಮಾನಿಸಿ ಬೀಳ್ಕೊಟ್ಟರು.
1800 ಕಿ.ಮೀ ದೂರದ ರಾಷ್ಟ್ರದ ರಾಜ್ಯಧಾನಿಗೆ ಪಾದಯಾತ್ರೆಕೈಗೊಂಡಿರುವ ಅವರು, ದಿನಂಪ್ರತಿ 50 ಕಿ.ಮೀ. ಕ್ರಮಿಸುವ ಗುರಿ ಇಟ್ಟುಕೊಂಡು ಸಾಗುತ್ತಿದ್ದಾರೆ.ಪಂಢರಪುರ, ಪುಣೆ, ಮುಂಬಯಿ ಮೂಲಕ ದೆಹಲಿಗೆ ತಲುಪಲಿದ್ದಾರೆ.
ಹೊರ್ತಿ ಗ್ರಾಮಕ್ಕೆ ಮಂಜುಳಾ ಆಗಮಿಸಿದಾಗ ಆಟೋ ಚಾಲಕರ ಸಂದ ಅಧ್ಯ ಶರಣಬಸು ಡೋಣಗಿ ಸಂಗಡಿಗರು ಅವರನ್ನು ಸನ್ಮಾನಿಸಿದರು.
ಗುಂಡು ಲೋಣಿ, ರಮಜಾನ ಪಠಾಣ, ರಾಮಣ್ಣ ಪತ್ತಾರ, ಕಾಂತುರೂಗಿ, ಸಿದ ಮಸಳಿಕೇರಿ, ಅವಿನಾಶ ಹಿರೇಮದ, ಮಲ್ಲುಜಂಬಗಿ, ರಾಜುರೂಗಿ, ಅನಿಲಕುಮಾರ ಪೂಜಾರಿ, ಶಿವಾನಂದ ಮೇತ್ರಿ ಹಾಗೂ ಗ್ರಾಮಸ್ಥರು ಇದ್ದರು.