

ಮುದ್ದೇಬಿಹಾಳ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆ ಪರ ಹೋರಾಟದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯ ಬಿ.ವೆ.ವಿಜಯೇಂದ್ರ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ತೇಜೋವಧೆ ಮುಂದುವರೆದಲ್ಲಿ ನಾವೂ ಪ್ರತಿರೋಧ ತೋರಿಸಬೇಕಾಗುತ್ತದೆ. ಇದು ರ್ಷಣೆಗೆ ದಾರಿ ಮಾಡಿಕೊಟ್ಟು ಯತ್ನಾಳರಿಗೇ ಮುಳುವಾಗಬಹುದು. ಹೋರಾಟ ದಾರಿ ತಪ್ಪದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ಮತ್ತು ನಡಹಳ್ಳಿ ಅಭಿಮಾನಿ ಬಳಗದ ಮುಖಂಡರು ಎಚ್ಚರಿಸಿದ್ದಾರೆ.
ಮಂಡಲ ಅಧ್ಯ ಜಗದೀಶ ಪಂಪಣ್ಣವರ್, ಮುಖಂಡರಾದ ಮಲ್ಲಿಕಾರ್ಜುನ ತಂಗಡಗಿ, ಮುನ್ನಾಧಣಿ ನಾಡಗೌಡ, ಸಿದ್ದರಾಜ ಹೊಳಿ, ಹರೀಶ ನಾಟೀಕಾರ, ಸಂಗಮ್ಮ ದೇವರಳ್ಳಿ ಇನ್ನಿತರರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ, ಹಿಂದುಪರ ಸಂಟನೆಗ ಕಾರ್ಯಕರ್ತರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು, ಕಾಂಗ್ರೆಸ್ ಬೆಂಬಲಿಸುವವರು ನಮ್ಮ ನಾಯಕರ ಭಾವಚಿತ್ರಗಳಿಗೆ ಅವಮಾನಿಸುವ, ಅವಾಚ್ಯ ಭಾಷೆ ಬಳಸಿ ಬಾಯಿಚಪಲ ತೀರಿಸಿಕೊಳ್ಳುತ್ತಿದ್ದಾರೆ. ತಾಳಿಕೋಟೆ, ಮಿಣಜಗಿಯಲ್ಲಿನ ಟನೆಗಳ ವಿಡಿಯೋ ಆಧರಿಸಿ ಪದ ಐಟಿ ಸೆಲ್ ಕಾನೂನು ಕ್ರಮ ಕೈಕೊಳ್ಳತೊಡಗಿದೆ ಎಂದರು.
ಯತ್ನಾಳ ಉಚ್ಚಾಟನೆ ಪದ ಕೇಂದ್ರ ಶಿಸ್ತು ಸಮಿತಿ ನಿರ್ಧಾರ. ಇದು ನಮಗೂ ಬೇಸರ ಮೂಡಿಸಿದೆ. ಪದ ನಿಲುವನ್ನು ನಾವೆಲ್ಲರೂ ಪರಿಗಣಿಸಲೇಬೇಕಾಗುತ್ತದೆ. ಯತ್ನಾಳ ಪರ ಹೋರಾಟದ ಹೆಸರಿನಲ್ಲಿ ಪಂಚಮಸಾಲಿ ಸಮಾಜವನ್ನು ಬಳಸಿಕೊಂಡು ನಡಹಳ್ಳಿಯವರನ್ನು ಟಾರ್ಗೆಟ್ ಮಾಡುತ್ತಿರುವುದರ ಹಿಂದೆ ಯಾರ ಷಡ್ಯಂತ್ರ ಇದೆ ಎಂಬುವುದು ಎಲ್ಲರಿಗೂ ಗೊತ್ತಾಗಿದೆ ಎಂದರು.
ಮಲ್ಲಿಕಾರ್ಜುನ ತಂಗಡಗಿ, ಹರೀಶ ನಾಟೀಕಾರ ಮಾತನಾಡಿ, ಮಾಜಿ ಸಚಿವೆ, ಪಂಚಮಸಾಲಿ ನಾಯಕಿ ವಿಮಲಾಬಾಯಿ ದೇಶಮುಖರಿಗೆ 2013ರಲ್ಲಿ ಜೆಡಿಎಸ್ ಟಿಕೇಟ್ ತಪ್ಪಿಸಲು, ಬಬಲೇಶ್ವರದಲ್ಲಿ ವಿಜುಗೌಡ ಪಾಟೀಲರ ಸೋಲಿಗೆ ಕಾರಣರಾದವರು ಯಾರು. ಅವರ ವಿರುದ್ಧ ಹೋರಾಟ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಜ ಹೊಳಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜದವರ, ಸ್ವಾಮೀಜಿ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ಕಾಂಗ್ರೆಸ್ ಬೆಂಬಲಿಸುವ ಪಂಚಮಸಾಲಿಗಳು ಪ್ರತಿರೋಧ ತೋರಲಿಲ್ಲ. ಅದನ್ನು ಮೊದಲು ಪ್ರತಿಭಟಿಸಿದವರು ನಡಹಳ್ಳಿಯವರು ಎಂದರು.
ಪ್ರಮುಖರಾದ ಸಂಜು ಬಾಗೇವಾಡಿ, ಪ್ರೇಮಸಿಂಗ್ ಚವ್ಹಾಣ, ಪರಶುರಾಮ ನಾಲತವಾಡ, ಶಂಕರಗೌಡ ಶಿವಣಗಿ, ಗಿರೀಶಗೌಡ ಪಾಟೀಲ ಹಿರೇಮುರಾಳ, ಲಕ್ಷ$್ಮಣ ಬಿಜ್ಜೂರ, ಸಂಗಮೇಶ ಗುಂಡಕನಾಳ ನಾಗೂರ, ಗೌರಮ್ಮ ಹುನಗುಂದ, ಏಕನಾಥ ಸೀತಿಮನಿ, ಶೇಖರ ಮಾದರ ಆಲೂರ, ಅಶೋಕ ಚಿನಿವಾರ, ನಿಖಿಲ್ ಮಲಗಲದಿನ್ನಿ, ಸಿದ್ದು ಹಿರೇಮಠ, ಗುರುಪಾದ ವಡ್ಡರ ಇದ್ದರು.