ಮಡಿವಾಳ ಮಾಚಿದೇವರ ರಥೋತ್ಸವ

Madiwala Machidevara Chariot Festival
ದೇವರಹಿಪ್ಪರಗಿಯಲ್ಲಿ ಶನಿವಾರ ಜರುಗಿದ ಮಡಿವಾಳ ಮಾಚಿದೇವರ ರಥೋತ್ಸವದಲ್ಲಿ ಪಾಲ್ಗೊಂಡಿರುವ ಭಕ್ತರು.
Published on

ದೇವರ ಹಿಪ್ಪರಗಿ: ಮಡಿವಾಳ ಮಾಚಿದೇವರ ರಥೋತ್ಸವ ಹಾಗೂ ಪಲ್ಲಕ್ಕಿ ಮಹೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.

ಪಟ್ಟಣದಲ್ಲಿ ಮಾಚಿದೇವರ ರಥೋತ್ಸವದ ನಿಮಿತ್ತ ಗದ್ದುಗೆಮಠದಲ್ಲಿ ಮಡಿವಾಳೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹೋಮ ಜರುಗಿತು. ಮಾಚಿದೇವರನ್ನು ಹೊತ್ತ ಪಲ್ಲಕ್ಕಿ ಗದ್ದುಗೆಮಠದಿಂದ ಹೊರಟು ಬಜಾರ್​ದಲ್ಲಿರುವ ತೇರಿನವರೆಗೆ ಸಾಗಿತು.ಭಕ್ತ ಸಮೂಹ ಉತ್ಸಾಹದಿಂದ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net