ಮಡಿವಾಳೇಶ್ವರ ತೊಟ್ಟಿಲೋತ್ಸವ

Madivaleshwar Tottilotsava
ಕೊಲ್ಹಾರದಲ್ಲಿ ಕಡಕೋಳ ಮಡಿವಾಳೇಶ್ವರ ಪುರಾಣ ಸಂದರ್ಭದಲ್ಲಿ ಸುಮಂಗಲಿಯರು ಕಡಿವಾಳೇರ್ಶವರ ತೊಟ್ಟಿಲೋತ್ಸವ ನೆರವೇರಿಸಿದರು. ಅಥರ್ಗಾದ ಮುರುಂದ್ರ ಸ್ವಾಮೀಜಿ, ದಿಗಂಬರೇಶ್ವರ ಸಂಸ್ಥಾನ ಮಠದ ಶ್ರೀ ಕಲ್ಲಿನಾಥ ದೇವರು ಇದ್ದರು.
Published on

ಕೊಲ್ಹಾರ: ಪಟ್ಟಣದ ದಿಗಂಬರೇಶ್ವರ ಜಾತ್ರೆ ನಿಮಿತ್ತ ಕಡಕೋಳ ಮಡಿವಾಳೇಶ್ವರ ಪುರಾಣದ ಲ್ಲಿ ಕಡಕೋಳ ಮಡಿವಾಳೇಶ್ವರರ ತೊಟ್ಟಿಲೋತ್ಸವ ಸನ್ನಿವೇಶಕ್ಕೆ ಅನುಗುಣವಾಗಿ ಸುಮಂಗಲಿಯರು ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.

ಸುಮಂಗಲಿಯರು ಆರತಿ ಮಾಡಿ ದಿಗಂಬರೇಶ್ವರ ಮತ್ತು ಮಡಿವಾಳೇಶ್ವರಿಗೆ ನಾಮಕರಣ ಮಾಡಿದರು. ಸಂಪ್ರದಾಯದಂತೆ ಮುತೈದಿಯರು, ಜೋಗುಳ ಪದ ಹಾಡಿ ತೊಟ್ಟಿಲು ತೂಗಿ ಸಂಭ್ರಮಿಸಿದರು.

ಅಥರ್ಗಾದ ಮುರುಂದ್ರ ಸ್ವಾಮೀಜಿ, ದಿಗಂಬರೇಶ್ವರ ಸಂಸ್ಥಾನ ಮಠದ ಶ್ರೀ ಕಲ್ಲಿನಾಥ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೇರಟಗಿ ಶಿವಯ್ಯ ಸ್ವಾಮಿ, ಮೊರಟಗಿ ರಮೇಶ ವಿಭೂತಿ, ಗ್ರಾಮ ಪಂಚಾಯಿತಿ ಪಡಿಒ ಜಿ. ಕೆ.ಬಗಲಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net