ಮೌಲ್ಯಯುತ ಜೀವನ ಸಾಗಿಸಿ

Live a valuable life.
ತಾಳಿಕೋಟೆ : ಈಶಾವಾಸ್ಯ ಉಪನಿಷತ್ತೀನ ಎರಡನೇ ಭಾಗದ ಆಧ್ಯಾತ್ಮಿಕ ಪ್ರವಚನದಲ್ಲಿ ಶೀ ಸಿದ್ಧ್ದಲಿಂಗ ದೇವರು ಮಾತನಾಡಿದರು.
Published on

ತಾಳಿಕೋಟೆ: ವೇದ, ಉಪನಿಷತ್​ಗಳು ಸನ್ಮಾರ್ಗ ತೋರುತ್ತವೆ ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀಸಿದ್ಧ್ದಲಿಂಗ ದೇವರು ಹೇಳಿದರು.

ಖಾಸ್ಗತೇಶ್ವರ ಸಭಾಭವನದಲ್ಲಿ ಏರ್ಪಡಿಸಿರುವ ಈಶಾವಾಸ್ಯ ಉಪನಿಷತ್ತಿನ ಎರಡನೇ ಭಾಗದ ಆಧ್ಯಾತ್ಮಿಕ ಪ್ರವಚನದಲ್ಲಿ ಮಾತನಾಡಿದ ಶ್ರೀಗಳು, ಸೃಷ್ಠಿಯಲ್ಲಿ ಎರಡು ಆತ್ಮಗಳಿವೆ ಒಂದು ನಾನಾತ್ಮ ಇನ್ನೊಂದು ಏಕಾತ್ಮ. ನಾನಾತ್ಮವೆಂದರೇ ನಾನು ಎಂಬ ಅಹಂಕಾರ ಹೊಂದಿರುದಾಗಿದೆ. ಬದುಕಿನ ಸತ್ಯವನ್ನು ತಿಳಿದುಕೊಂಡು, ಇನ್ನೊಬ್ಬರಿಗೆ ತೊಂದರೆ ಕೊಡದಂತೆ ಜೀವನ ಸಾಗಿಸುವುದೇ ಏಕಾತ್ಮ ಎಂದರು.

ಕಾಮ,ಕ್ರೋಧ, ಮದ,ಮತ್ಸರ, ಲೋಭ, ಮೋಹ ವೆಂಬ ವಿಷಯಗಳ ವ್ಯಾಮೋಹಕ್ಕೆ ತುತ್ತಾಗಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳದೇ ಇಂದ್ರಿಯ ನಿಗ್ರಹಿಸಿ ಮೌಲ್ಯಯುತ ಬದುಕು ಸಾಗಿಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net