ವೇಂಕಟೇಶ್ವರ ಮೂರ್ತಿ ಪ್ರತಿಷ್ಠಾಪನೆ

Installation of the Venkateswara idol
ನಾಲತವಾಡದಲ್ಲಿ ಶನಿವಾರ ಜರುಗಿದ ಶ್ರೀ ಲಕ್ಷಿ$್ಮ ವೆಂಕಟೇಶ್ವರ ಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಭಕ್ತರು.
Published on

ನಾಲತವಾಡ: ನೇಕಾರ ಪೇಟೆಯಲ್ಲಿ ನೂತನವಾಗಿ ನಿಮಾಣಗೊಂಡಿರುವ ಶ್ರೀವೆಂಕಟೇಶ್ವರ ದೇವಸ್ಥಾಣದಲ್ಲಿ ಶ್ರೀ ವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ತಿರುಪತಿಯಿಂದ ಆಗಮಿಸಿರುವ ವೆಂಕಟೇಶ್ವರ, ಲಕ್ಷಿ$್ಮ, ಶ್ರೀದೇವಿ, ಭೂದೇವಿಯರ ಕಂಚಿನ ಪುತ್ಥಳಿ ಹಾಗೂ ಗಣಪತಿ, ಜಯ& ವಿಜಯ, ಗರುಢ, ಆಂಜನೇಯ ಶಿಲಾ ಮೂರ್ತಿಗಳ ಮೆರವಣಿಗೆ ಶನಿವಾರ ವೈಭದಿಂದ ಜರುಗಿತು.

ಟಿಟಿಡಿ ದೇವಸ್ಥಾನದ ಸಮಿತಿಯಿಂದ ತರಲಾದ ದೇವರ ಮೂರ್ತಿಗಳ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನಿಡಲಾಯಿತು. 211 ಕುಂಭಗಳನ್ನು ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಜನೆ ತಂಡಗಳು, ಡೊಳ್ಳು ಕುಣಿತ ಸೇರಿದಂತೆ ನಾನಾ ವಾದ್ಯಗಳು ಮೆರವಣಿಗೆಗೆ ಮೆರಗು ತಂದವು. ಬಸ್​ ನಿಲ್ದಾಣ ರಸ್ತೆ, ಶ್ರೀ ಬಸವೇಶ್ವರ ವೃತ್ತ್ತ, ಗಣಪತಿ ಚೌಕ್​ ಸೇರಿದಂತೆ ಪ್ರಮುಖ ಬೀದಿಗಳ ಮೂಲಕ ದೇವಸ್​ಆಥನದ ವರೆಗೆ ನಡೆಯಿತು.

ಮೂಲಚಂದ ತ್ರಿ,ಕೂಡ್ಲಪ್ಪ ತ್ರಿ, ಪಟ್ಟಣ ಪಂಚಾಯಿತಿ ಸದಸ್ಯ ಅಮರಪ್ಪ ಶೀರಿ, ವೆಂಕಪ್ಪ ತ್ರಿ, ರವಿ ಸೀರಿ, ಮಂಜುನಾಥ ಗಣಾಚಾರಿ, ಗುಂಡಪ್ಪ ಮಾವಿನತೋಟ, ಸಂಗಪ್ಪ ತ್ರಿ ಸೇರಿ ಭಕ್ತರು ಪಾಲೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net