

ತಾಳಿಕೋಟೆ: ಹಿಂದುಗಳು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ ಎಂದು ಆರ್ಎರಸ್ಎಸ್ ಮುಖಂಡ ಸುಧೀರ ದೇಶಪಾಂಡೆ ಹೇಳಿದರು.
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ಹೀನ ಕೃತ್ಯ ಖಂಡಿಸಿ ಬುಧವಾರ ಸಂಜೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದು ಧರ್ಮಿಯರನ್ನೇ ಟಾರ್ಗೇಟ್ ಮಾಡಿ ಉಗ್ರರು ನಡೆಸಿದ ಪೇಶಾಚಿಕ ಕೃತ್ಯಕ್ಕೆ ತಕ್ಕ ಉತ್ತರ ನೀಡಲು ಹಿಂದುಗಳು ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದರು.
ಉಗ್ರರ ಉಪಟಳ ಹತ್ತು ವರ್ಷಗಳಲ್ಲಿ ಕಡಿಮೆಯಾಗಿತ್ತು ಎನ್ನುವಷ್ಟರಲ್ಲಿಯೇ ಮತ್ತೇ ಪೈಶಾಚಿಕ ಕೃತ್ಯ ಎಸುಗಿದ್ದಾರೆ. ಇಂತಹ ಹೀನ ಕೃತ್ಯ ನಡೆಸುವ ಉಗ್ರಗಾಮಿಗಳನ್ನು ಬುಡ ಸಮೇತ ಕಿತ್ತೇಸೆಯುವ ಹಾಗೂ ಪಾಪಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ನಾವು ಒಗ್ಗಟ್ಟಾಗುವುದು ಅಗತ್ಯವಾಗಿದೆ ಎಂದರು.
ಪಂಜಿನ ಮೇರವಣಿಗೆಗೆ ಚಾಲನೆ ನೀಡಿದ ಶ್ರೀಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀಸಿದ್ದಲಿಂಗ ದೇವರು ಮಾತನಾಡಿ, ಕಾಶ್ಮೀರದಲ್ಲಿ ನಡೆದ ಟನೆಗೆ ಪ್ರತಿಕಾರವಾಗಿ ಉಗ್ರವಾದಿಗಳನ್ನು ಬುಡ ಸಮೇತ ಕಿತ್ತೇಸೆವುದೇ ಆಗಿದೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆ ಆ ಕೆಲಸದಲ್ಲಿ ತೊಡಗಿದ್ದು, ನಾವೇಲ್ಲ ಭಾರತೀಯರು ಒಂದಾಗಿ ಅವರ ಕೈ ಜೋಡಿಸಬೇಕು ಎಮದರು.
ಪಟ್ಟಣದ ಅಂಬಾಭವಾನಿ ಮಂದಿರದಿಂದ ಪ್ರಾರಂಭಗೊಂಡ ಪಂಜಿನ ಮೇರವಣಿಗೆಯು ಕತ್ರಿ ಬಜಾರ್ ಮಾರ್ಗವಾಗಿ ಬಾಲಾಜಿ ಮಂದಿರ ರಸ್ತೆ, ವಿಠ್ಠಲಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ್ತ, ಮಹಾರಾಣಾಪ್ರತಾಪಸಿಂಹ ವೃತ್ತ್ತ, ಬಸ್ ನಿಲ್ದಾಣದ ಮುಖಾಂತರ ಬಸವೇಶ್ವರ ವೃತ್ತಕ್ಕೆ ತೆರಳಿ ಉಗ್ರರ ದಾಳಿಗೆ ಬಲಿಯಾದರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಿವಭವಾನಿ ಮಂದಿರದ ಅರ್ಚಕ ಸಂತೋಷ ಭಟ್ಟ ಜೋಶಿ, ಗುಂಡಭಟ್ಟ ಜೋಶಿ ಹಾಗೂ ಹಿಂದು ಸಮಾಜದ ಮುಖಂಡರುಗಳು ಪಾಲ್ಗೊಂಡಿದ್ದರು.