

ಆಲಮಟ್ಟಿ; ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯ ಸಂಕನಾಳ ಶಾಖಾ ಕಾಲುವೆಯಿಂದ ವಿತರಣಾ ಕಾಲುವೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಮಂಗಳವಾರ ಅಹೋರಾತ್ರಿ ಧರಣಿ ಆರಂಭಿಸಿದರು.
ಇಲ್ಲಿನ ರಾಮಲಿಂಗೇಶ್ವರ ದೇವಸ್ಥಾನದಿಂದ ಕೆಬಿಜೆಎನ್ಎಲ್ ಮುಖ್ಯ ಅಭಿಯಂತರರ ಕಚೇರಿವರೆಗೆ ಜಾನುವಾರುಗಳ ಸಮೇತ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಕಚೇರಿ ಬಳಿ ಧರಣಿ ಆರಂಭಿಸಿದರು.
ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಸಂಕನಾಳ ಶಾಖಾ ಕಾಲುವೆಯಿಂದ ಹೂವಿನ ಹಿಪ್ಪರಗಿ ಹೋಬಳಿ ವ್ಯಾಪ್ತಿಗಳಲ್ಲಿ ವಿತರಣಾ ಕಾಲುವೆ ನಿರ್ಮಾಣ ಕಾಮಗಾರಿ 2 ಕಿ.ಮೀ ಬಾಕಿ ಉಳಿದಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಕಾನ್ನಾಳ, ಸಂಕನಾಳ, ಬ್ಯಾಲ್ಯಾಳ, ಅಗಸಬಾಳ, ನರಸಲಗಿ, ಸೋಲವಾಡಗಿ, ಜಾಯವಾಡಗಿ, ಖಾಜಿ ಅಗಸಬಾಳ ಗ್ರಾಮಗಳಿಗೆ ಕುಡಿವ ನೀರಿಗೆ ಅನುಕೂಲ ಮಾಡಿ ಕೊಡಬೇಕು ಎಮದು ಆಗ್ರಹಿಸಿದರು.
ತಾಲೂಕಾಧ್ಯ ಉಮೇಶ ವಾಲಿಕಾರ ಮಾತನಾಡಿ, ಬಾಕಿ ಉಳಿದಿರುವ ವಿತರಣಾ ಕಾಲುವೆ ಕಾಮಗಾರಿ ಪ್ರಾರಂಭಿಸಿ 8 ಹಳ್ಳಿಗಳಿಗೆ ನೀರು ಕೊಡುವ ವರೆಗೂ ಧರಣಿ ಮುಂದುವರೆಯಲಿದೆ ಎಂದರು.
ಹಣಮಂತ ಕುಲಬುರ್ಕಿ, ಸೋಮೇಶ ನಾಗರೆಡ್ಡಿ, ಆನಂದ ನಾಗರೆಡ್ಡಿ, ಮಾರುತಿ ಹೂಗಾರ, ಶೇಖಪ್ಪ ಹೋಸುರ, ಯಮನಪ್ಪ ದರ್ಮಗಿರಿ, ವೈ.ಪಿ.ಧರ್ಮಗಿರಿ, ರವಿ ಧರ್ಮಗಿರಿ, ಅಶೋಕ ಹಚಡದ, ಶಿವಪ್ಪ ವಾಲಿಕಾರ, ಮಲಿಗೆಪ್ಪ ನಾಟೀಕಾರ, ಶಂಕರಗೌಡ ಬಿರಾದಾರ, ಕುಶಪ್ಪ ಧರ್ಮಗಿರಿ, ಮೌಲಾ ಯಲಿಗಾರ, ಸೋಮರಾರಾಯ ಭಜಂತ್ರಿ, ಶಂಕ್ರೆಪ್ಪ ನಾಗರೆಡ್ಡಿ, ಶ್ರೀಶೈಲ ತೆಗ್ಗಿನಮಠ, ಶರಣಪ್ಪ ನಾಟೀಕಾರ, ಪ್ರವಿಣ ಹೊಸೂರ ಇತರರಿದ್ದರು.