

ಬಸವನಬಾಗೇವಾಡಿ: ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬಸವನಬಾಗೇವಾಡಿ ಉಪವಿಭಾಗದ ರೌಡಿಶೀಟರ್ಗಳ ಪರೇಡ್ ನಡೆಯಿತು. ಕೊಲೆ, ದರೋಡೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 58 ಜನ ರೌಡಿಶೀಟರ್ಗಳು ಪರೇಡ್ನಲ್ಲಿ ಹಾಜರಿದ್ದರು.
ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಮಾತನಾಡಿ, ಸಮಾಜದ ಶಾಂತಿ ಕದಡುವ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕು. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಗಡಿ ಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಸವನಬಾಗೇವಾಡಿ ಪಿಎಸ್ಐ ಗುರುಶಾಂತ ದಾಶಾಳ, ಮುದ್ದೇಬಿಹಾಳ ಸಿಪಿಐ ಎಂ.ಡಿ.ಶಪೀಯುದ್ದಿನ್, ಪಿಎಸ್ಐ ಸಂಜಯ ತಿಪ್ಪಾರೆಡ್ಡಿ, ನಿಡಗುಂದಿ ಸಿಪಿಐ ಅಶೋಕ ಚವ್ಹಾಣ, ಶಿವಾನಂದ ಪಾಟೀಲ, ರಾಮನಗೌಡ ಸಂಕನಾಳ, ಎಂ.ಬಿ. ಬಿರಾದಾರ, ಎಂ.ವಿ. ಕುಲಕರ್ಣಿ, ಯತೀಶ್.ಕೆ ಎನ್. ಉಪಸ್ಥಿತರಿದ್ದರು