

ಪಟ್ಟಣದಲ್ಲಿನ ಮಲಿನ ನೀರು ನೇರವಾಗಿ ಹಳ್ಳಕ್ಕೆ ಸೇರುತ್ತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಪುರಸಭೆ ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳ ವಿರುಧ್ಧ ಸಾರ್ವಜನಿಕರು ಹರಿಹಾಯುತ್ತಿದ್ದಾರೆ.
ಒಳಚರಂಡಿ ನೀರನ್ನು ಶುದ್ದೀಕರಸಿ ನಂತರ ಹಳ್ಳಕ್ಕೆ, ನದಿಗೆ ಬಿಡಬೇಕು ಎಂಬ ನಿಯಮವಿದೆ. ಇದಕ್ಕಾಗಿ ಸರ್ಕಾರ ಕೊಟ್ಯಂತರ ರೂ. ಖರ್ಚು ಮಾಡಿ ಶುದ್ಧೀಕರಣ ಟಕ ಸ್ಥಾಪಿಸಿದೆ. ಆದರೆ ಶುದ್ಧೀಕರಿಸುವ ಯಂತ್ರಗಳೇ ಕಾರ್ಯ ನಿರ್ವಹಿಸುತ್ತಿಲ್ಲ. ಕಲುಷಿತಗೊಂಡ ಚರಂಡಿ ನೀರು ನೇರವಾಗಿ ಇಂಡಿ ಹಳ್ಳ ಹಾಗೂ ಕೆರೆಗಳಲ್ಲಿ ಸೇರುತ್ತಿವೆ.
ಪಟ್ಟಣದ ಒಳಚರಂಡಿ ನೀರಿನಲ್ಲಿರುವ ತ್ಯಾಜ್ಯ ಬೇರ್ಪಡಿಸುವ ಮೂಲಕ ಕೇವಲ ನೀರನ್ನು ಮಾತ್ರ ಎಸ್ಟಿಪಿ ಟಕಕ್ಕೆ ಹರಿಸಿ, ಅಲ್ಲಿ ಸಂಪೂರ್ಣವಾಗಿ ಶುದ್ಧೀಕರಿಸಿ ನಂತರ ಈ ನೀರನ್ನು ಹಳ್ಳಕ್ಕೆ ಹರಿಬಿಡಬೇಕು. ಆದರೆ ಪುರಸಭೆಯವರು ಒಳಚರಂಡಿ ನೀರನ್ನು ಶುದ್ಧೀಕರಿಸದೆ ಹಾಗೆ ಹಳ್ಳಕ್ಕೆ ಹರಿಬಿಡುತಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ.
ಈ ಚರಂಡಿ ನೀರು ಮಾವಿನಹಳ್ಳಿ ಜಲದಪ್ಪನ ಕೆರೆ, ಮತ್ತು ಹಳ್ಳದ ಮೂಲಕ ಇಂಗಳಗಿ, ಹಿರೇಬೇವನೂರ, ಭೂಯ್ಯಾರ ಹತ್ತಿರ ಇರುವ ಭೀಮಾನದಿಗೆ ಸೇರುತ್ತದೆ.
ಅದೇ ನೀರು ತಾಲೂಕಿನಾದ್ಯಂತ ಭೂಯ್ಯಾರ ಪ್ಯಾಕೆಜ್ ದಿಂದ ಎಲ್ಲ್ಲ ಕೆರೆಗಳು ತುಂಬಿಸಿ ಬಹು ಹಳ್ಳಿ ಕುಡಿಯುವ ನೀರು ಯೋಜನೆ ಮೂಲಕ ಪ್ರತಿಯೊಂದು ಗ್ರಾಮಗಳಿಗೆ ಕೊಡುತ್ತಾರೆ.
ಒಳಚರಂಡಿ ನೀರನ್ನು ಶುದ್ಧೀಕರಿಲು ಸುಮಾರು ಮೂರು ಹೊಂಡಗಳು ನಿರ್ಮಿಸಿದರೂ ಸಹ ಪುರಸಭೆಯವರು ಮೋಟಾರುಗಳನ್ನು ಪ್ರಾರಂಭಿಸುವ ಗೋಜಿಗೆ ಹೋಗಿಲ್ಲ. ಎಲ್ಲ್ಲ ಮೋಟಾರಗಳು ಚಾಲ್ತಿಯಲ್ಲಿಲ್ಲ. ಸಧ್ಯ ಎಲ್ಲ ಮೋಟಾರ್ಗಳೂ ತುಕ್ಕು ಹಿಡಿದಿದೆ.
ಒಳಚರಂಡಿ ನೀರು ಶುದ್ಧೀಕರಿಸುವುದು, ಇದರಿಂದ ಮಾಲಿನ್ಯ ಅಥವಾ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡದೆ ನದಿಗಳು, ಹಳ್ಳ ಭೂಮಿಗಳು ಸುರತವಾಗಿ ವಿಲೇವಾರಿ ಮಾಡಬಹುದು.
ಇಂಡಿ ಅಂತರ್ಜಲವೂ ಕಲುಷಿತ: ಇಂಡಿ ಹಳ್ಳಕ್ಕೆ ಸುಮಾರು ವರ್ಷದಿಂದಲೂ ಚರಂಡಿ ನೀರು ಸೇರುತ್ತಿರುವ ಕಾರಣ ಅಂತರ್ಜಲವೂ ಕಲುಷಿತಗೊಂಡಿದೆ. ಈ ಭಾಗದ ಜನರು ಕೊಳವೆ ಬಾವಿ ನೀರು ಕುಡಿಯುವುದನ್ನೇ ಬಿಡುವ ಸಂದರ್ಭ ಬಂದಿದೆ ಎಂಬುದು ಸಾರ್ವಜನಿಕರ ಅಳಲಾಗಿದೆ.