ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ

Complete the lift irrigation project.
ಪೀರಾಪುರ- ಬೂದಿಹಾಳ ಏತ ನೀರಾವರಿ ಯೋಜನೆ ಕ್ರಿಯಾಶೀಲ ವೇದಿಕೆ ಪದಾಧಿಕಾರಿಗಳು ಕೆಬಿಜೆಎನ್​ಎಲ್​ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
Published on

ಕಲಕೇರಿ: ಪೀರಾಪುರ - ಬೂದಿಹಾಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲೂಕಿನ ಪೀರಾಪುರ ಬೂದಿಹಾಳ ಏತ ನೀರಾವರಿ ಯೋಜನೆ ಕ್ರಿಯಾಶೀಲ ವೇದಿಕೆ ಪದಾಧಿಕಾರಿಗಳು ಕೆಬಿಜೆಎನ್​ಎಲ್​ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಈ ಯೋಜನೆಗಾಗಿ ಸರ್ಕಾರ ಈಗಾಗಲೇ 800 ಕೋಟಿ ರೂ. ಹಣ ವ್ಯಯ ಮಾಡಿದೆ. ಆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೊಲಗಾಲುವೆಯ ಕಾಮಗಾರಿ ಶೇ.10 ರಷ್ಟು ಬಾಕಿ ಇದ್ದು, ಬೇಸಿಗೆಯಲ್ಲಿ ಪೂರ್ಣಗೊಳಿಸಬೆಕು ಎಂದು ಒತ್ತಾಯಿಸಿದರು.

ಈಗಾಗಲೇ ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಶೋಚನೀಯವಾಗಿದ್ದು. ಹಳ್ಳಿಗಳ ಜನರು ಬೆಂಗಳೂರು, ಮುಂಬಯಿ, ಗೋವಾ, ಪುಣೆ, ರತ್ನಾಗಿರಿ, ಪಣಜಿ, ಕರಾಡಗಳಿಗೆ ಕೆಲಸಕ್ಕೆ ಗುಳೆ ಹೋಗುತ್ತಿದ್ದಾರೆ. ಈ ಯೋಜನೆ ಪೂರ್ಣ ಅನುಷ್ಠಾನವಾದಲ್ಲಿ ಈ ಭಾಗದ 38 ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದರು.

ಪ್ರಮುಖರಾದ ಪ್ರಭುಗೌಡ ಬಿರಾದಾರ ಅಸ್ಕಿ, ರವೀಂದ್ರ ಸುಧಾಕರ್​ ಬನ್ನಿಹಟ್ಟಿ ಪಿ.ಟಿ, ಅಶೋಕ ದೊರಿಗೋಳ ಬೆಕಿನಾಳ, ಮಹಾಂತೇಶ ಕಾಂಬಳೆ ಕಲಕೇರಿ, ರುದ್ರಗೌಡ ಬಿರಾದಾರ ಅಸ್ಕಿ, ಶಿವಪುತ್ರ ಚೌಧರಿ ನೀರಲಗಿ, ಜಿ.ಬಿ.ಬಾಗೇವಾಡಿ ತಿಳಗೂಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net