

ತಾಳಿಕೋಟೆ: ಯತ್ನಾಳ ಅಭಿಮಾನಿಗಳು ಬಿಜೆಪಿ ನಾಯಕರನ್ನು ಅವಮಾನಿಸಿದ ಹಿನ್ನೆಲೆ ಮಾಜಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅಭಿಮಾನಿಗಳು ಪಟ್ಟಣದಲ್ಲಿ ಸೋಮವಾರ ಮಾಜಿ ಸಿ.ಎಂ. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯ ವಿಜಯೇಂದ್ರ ಮತ್ತು ಬಿಜೆಪಿ ರೈತ ಮೂರ್ಚಾ ರಾಜ್ಯಾಧ್ಯ ಎ.ಎಸ್. ಪಾಟೀಲ (ನಡಹಳ್ಳಿ) ಅವರ ಭಾವಚಿತ್ರಗಳಿಗೆ ತುಪ್ಪದೊಂದಿಗೆ ರಾಭಿಷೇಕ ಮಾಡಿದಲ್ಲದೇ, ನಂತರ ಡಾ. ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಶೋಭಾಯಾತ್ರೆ ನಡೆಸಿದರು.
ಪಟ್ಟಣದ ಅಂಬಾ ಭವಾನಿ ಮಂದಿರ ರಸ್ತೆ, ಕತ್ರಿ ಭಜಾರ್, ಶಿವಾಜಿ ಮಹಾರಾಜರ ವೃತ್ತ್ತ, ಮಹಾರಾಣಾ ಪ್ರತಾಪಸಿಂಹ ವೃತ್ತ್ತ, ಬಸ್ ನಿಲ್ದಾಣ ಮುಂಭಾಗದ ರಸ್ತೆ ಮೂಲಕ ಬಸವೇಶ್ವರ ವೃತ್ತದವರೆಗೆ ಶೋಭಾಯಾತ್ರೆ ನಡೆಸಿ, ಪ್ರತಿರೋಧ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅನಾಗರಿಕ ರೀತಿಯಲ್ಲಿ ಯತ್ನಾಳರ ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯ ವಿಜಯೇಂದ್ರ, ಮಾಜಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರ ಭಾವಚಿತ್ರಕ್ಕೆ ಅವಮಾನಿಸುವ ಕೃತ್ಯ ಎಸಗುತ್ತಿದ್ದಾರೆ. ಮಾಜಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಸಿದ್ಧಗಂಗಾ ಮಠದಲ್ಲಿ ಶಿಣ ಪಡೆದು ಸಂಸ್ಕಾರವಂತರಾಗಿದ್ದಾರೆ. ಅಂಥವರನ್ನು ಅವಮಾನಿಸುವುದು ಸರಿಯಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯ ಪ್ರಭುಗೌಡ ದೇಸಾಯಿ ಅವರು ಯತ್ನಾಳರ ಹೆಸರಿನ ಮೇಲೆ ಕಾಂಗ್ರೆಸ್ಸಿಗರ ಗುಂಪು ಕಟ್ಟಿಕೊಂಡು ಪ್ರತಿಭಟಿಸುವ ನೆಪದಲ್ಲಿ ನಮ್ಮ ನಾಯಕರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಪಂಚಮಸಾಲಿ ಸಮಾಜದ ಮುಖಂಡ ಸಿದ್ದರಾಜು ಹೊಳಿ ಮಾತನಾಡಿ, ಪಂಚಮಸಾಲಿ ಸಮಾಜದಲ್ಲಿ ಸಾಕಷ್ಟು ಜನರು ಶಾಸಕರಿದ್ದಾರೆ ಮತ್ತು ಮುಖಂಡರಿದ್ದಾರೆ. ಅವರೆಲ್ಲರನ್ನು ತುಳಿಯುವ ಕೆಲಸ ಮಾಡುತ್ತಾ ಬಂದಿರುವ ಯತ್ನಾಳ ಅವರು ತಮ್ಮ ಉಚ್ಚಾಟನೆಯನ್ನು ಸಮಾಜಕ್ಕೆ ಅಂಟಿಸುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಯತ್ನಾಳರನ್ನು ಉಚ್ಚಾಟಿಸಿದ್ದು, ವಿಜಯೇಂದ್ರ, ಯಡಿಯೂರಪ್ಪ, ಮಾಜಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರಲ್ಲ ಎಂಬುದನ್ನು ಯತ್ನಾಳ ಅರಿತುಕೊಳ್ಳಲಿ ಎಂದರು.
ಬಿಜೆಪಿ ಜಿಲ್ಲಾ ಅಧ್ಯ ಗುರುಲಿಂಗಪ್ಪ ಅಂಗಡಿ ಮತ್ತು ಪ್ರಭುಗೌಡ ಬಿರಾದಾರ (ಅಸ್ಕಿ) ಮಾತನಾಡಿದರು.
ಬಿಜೆಪಿ ಮುಖಂಡರಾದ ವಾಸುದೇವ ಹೆಬಸೂರ, ಪ್ರಕಾಶ ಹಜೇರಿ, ಸಂಗಮ್ಮ ದೇವರಳ್ಳಿ, ರಾವೇಂದ್ರ ವಿಜಾಪುರ, ಸೋಮನಗೌಡ ಪಾಟೀಲ (ನಡಹಳ್ಳಿ), ಶಿವಶಂಕರ ಹಿರೇಮಠ, ಎಂ.ಎಂ. ಪಾಟೀಲ, ರಾಜುಗೌಡ ಗುಂಡಕನಾಳ, ರಾಜುಗೌಡ ಕೊಳೂರ, ಮಾನಸಿಂಗ್ ಕೊಕಟನೂರ, ಜೈಸಿಂಗ್ ಮೂಲಿಮನಿ, ನದೀಂ ಕಡು, ಶಂಕರ ರಾಠೋಡ, ಮುರುಗೆಪ್ಪ ಸರಶೆಟ್ಟಿ, ಬಸವರಾಜ ಕೊಡೇಕಲ್ಲ, ಗುರುನಾಥರಡ್ಡಿ ಪಾಟೀಲ, ಯಲಗೂರೇಶ ಕುಲಕರ್ಣಿ, ಭೀಮಣ್ಣ ತಳವಾರ ಪಾಲ್ಗೊಂಡಿದ್ದರು.